World Wrestling Championships: ಭಾರತೀಯ ಕುಸ್ತಿಪಟುಗಳಿಗೆ ನಿರಾಶೆ

Team Udayavani, Sep 18, 2023, 11:05 PM IST

World Wrestling Championships: ಭಾರತೀಯ ಕುಸ್ತಿಪಟುಗಳಿಗೆ ನಿರಾಶೆ

ಬೆಲ್‌ಗ್ರೇಡ್: ಭಾರತೀಯ ಪುರುಷರ ಫ್ರೀಸ್ಟೈಲ್‌ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ನಿರ್ವಹಣೆ ನೀಡಿ ನಿರಾಶೆಗೊಳಿಸಿದ್ದಾರೆ. ಪದಕ ಗೆಲ್ಲಲು ವಿಫ‌ಲರಾದರಲ್ಲದೇ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲೂ ಅಸಮರ್ಥರಾದರು.

ಇದಕ್ಕಿಂತಲೂ ನಿರಾಶೆಯ ಸಂಗತಿ ಯೆಂದರೆ ಕುಸ್ತಿಪಟುಗಳು ಅಷ್ಟೊಂದು ಬಲಿಷ್ಠವಲ್ಲದ ರಾಷ್ಟ್ರಗಳ ಕುಸ್ತಿಪಟುಗ ಳೆದುರು ಸೋತಿರುವುದು ಆಗಿದೆ. ಇದರಿಂದ ಕುಸ್ತಿಪಟುಗಳ ಫಿಟ್‌ನೆಸ್‌ ಸಾಮರ್ಥ್ಯದ ಬಗ್ಗೆಯೆ ಸಂಶಯ ಕಾಣುತ್ತಿದೆ.
79 ಕೆ.ಜಿ. ವಿಭಾಗದಲ್ಲಿ ಸಚಿನ್‌ ಮೋರ್‌ ಅವರು ಉತ್ತರ ಮಸೆಡೋನಿ ಯದ ಅಹ್ಮದ್‌ ಮಗೊಮೆಡೋವ್‌ ಅವರ ವಿರುದ್ಧ ರೆಪಚೇಜ್‌ ಸುತ್ತಿನಲ್ಲಿ ಸೋತರು. 65 ಕೆ.ಜಿ. ವಿಭಾಗದಲ್ಲಿ ಅನುಜ್‌ ಕುಮಾರ್‌ ಅರ್ಹತಾ ಸುತ್ತಿನಲ್ಲಿಯೇ ಮೆಕ್ಸಿಕೋದ ಆಸ್ಟಿನ್‌ ಕ್ಲೀ ಗೊಮೆಜ್‌ ವಿರುದ್ಧ 7-8 ಅಂತರದಿಂದ ಸೋತು ಹೊರಬಿದ್ದರು.

ಭಾರತದ ಪದಕದ ಭರವಸೆ ಅಮಾನ್‌ ಸೆಹ್ರಾವತ್‌ 57 ಕೆ.ಜಿ. ವಿಭಾ ಗದ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಅಲ್ಬನಿಯಾದ ಝೆಲಿಮ್‌ಖಾನ್‌ ಅಬಕರೋವ್‌ ಅವರ ವಿರುದ್ಧ ಸೋತು ಆಘಾತಕ್ಕೆ ಒಳ ಗಾದರು. ಆಬಳಿಕ ರಷ್ಯದ ಕುಸ್ತಿಪಟು ಫೈನಲಿಗೇರು ವಿಫ‌ಲರಾದ ಕಾರಣ ಭಾರತೀಯ ಕುಸ್ತಿಪಟುವಿಗೆ ರೆಪಚೇಜ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ.

70 ಕೆ.ಜಿ.ಯಲ್ಲಿ ಅಭಿಮನ್ಯು ಅರ್ಮೇನಿಯದ ಅರ್ಮಾಭ್‌ ಆ್ಯಂಡ್ರೆ ಸ್ಯಾನ್‌ ಅವರ ವಿರುದ್ಧ ತಾಂತ್ರಿಕ ಹಂತದಲ್ಲಿ ಸೋತು ಹೊರಬಿದ್ದರು. ಅವರ ಜತೆ ಆಕಾಶ್‌ ದಹಿಯ, ನವೀನ್‌, ಸಂದೀಪ್‌ ಸಿಂಗ್‌ ಮಾನ್‌, ಪೃಥ್ವಿರಾಜ್‌, ಸಾಹಿಲ್‌ ಮತ್ತು ಸುಮಿತ್‌ ಕೂಡ ಸ್ಫರ್ಧೆಯ ವಿವಿಧ ಹಂತಗಳಲ್ಲಿ ಸೋತು ಹೊರಬಿದ್ದರು.

ಭಾರತೀಯ ಕುಸ್ತಿಪಟುಗಳು ತಟಸ್ಥ ಆ್ಯತ್ಲೀಟ್‌ಗಳಾಗಿ ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ಕುಸ್ತಿಯ ವಿಶ್ವ ಆಡಳಿತ ಮಂಡಳಿ ಭಾರತೀಯ ಫ‌ುಟ್‌ಬಾಲ್‌ ಫೆಡರೇಶನ್‌ ಅನ್ನು ನಿಷೇಧಿಸಿದ್ದರಿಂದ ಕುಸ್ತಿಪಟುಗಳು ಭಾರತೀಯ ಧ್ವಜದಡಿ ಸ್ಪರ್ಧಿಸಿಲ್ಲ.

ತಂಡದ ಕೆಲವು ಕುಸ್ತಿಪಟುಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಸಂಶಯ ಇದೀಗ ಕಾಡುತ್ತಿದೆ. ಸ್ಪರ್ಧೆಗೆ ಆಯ್ಕೆಯಾದ ಕುಸ್ತಿಪಟುಗಳ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಭಾರತೀಯ ಕುಸ್ತಿ ಫೆಡರೇಶನ್‌ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿತ್ತು ಎಂದು ತಿಳಿದುಬಂದಿದೆ. 65 ಕೆ.ಜಿ. ವಿಭಾಗದ ಕುಸ್ತಿ ಪಟುವೊಬ್ಬರು ಗಾಯಗೊಂಡಿದ್ದರು ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಎನ್‌ ಪ್ರಸೂದ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

1——dsad

Women’s Reservation Bill ಮೂಲಕ ‘ಶಕ್ತಿ’ಯನ್ನು ಪೂಜಿಸುವ ಭಾವನೆ: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Asian Games: Gold for India in Shooting Trap Men’s Team Event

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

Asian Games: ಗಾಲ್ಫ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಅದಿತಿ ಅಶೋಕ್

Asian Games: ಗಾಲ್ಫ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಅದಿತಿ ಅಶೋಕ್

Starc Takes Hat-Trick in ODI World Cup 2023 warm up match

ODI World Cup 2023: ಅಭ್ಯಾಸ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಸ್ಟಾರ್ಕ್; ವಿಡಿಯೋ ನೋಡಿ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.