ಎರಡನೇ ಟೆಸ್ಟ್: ಮಹತ್ವದ ಟಾಸ್ ಗೆದ್ದ ವಿರಾಟ್, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ

Team Udayavani, Feb 13, 2021, 8:58 AM IST

IndvsEng second test at chennai

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಸಜ್ಜಾಗಿದೆ. ಎಂ. ಚಿದಂಬರಂ ಸ್ಟೇಡಿಯಂ ನಲ್ಲಿ ಉಭಯ ತಂಡಗಳು ಸರಣಿಯ ಎರಡನೇ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿದ್ದರೆ, ಟೀಂ ಇಂಡಿಯಾ ತಿರುಗೇಟು ನೀಡಲು ಕಾಯುತ್ತಿದೆ.

ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದ್ದು, ಟೀಂ ಇಂಡಿಯಾದಲ್ಲೂ ಬದಲವಾಣೆ ಮಾಡಲಾಗಿದೆ. ಭಾರತದ ಪರ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರೆ, ಬಹಳ ಸಮಯದ ಬಳಿಕ ಕುಲದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೇಗಿ ಮೊಹಮದ್ ಸಿರಾಜ್ ಇಂದು ಇಶಾಂತ್ ಗೆ ಸಾಥ್ ನೀಡಲಿದ್ದಾರೆ. ವೇಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗದೆ. ನದೀಂ ಮತ್ತು ವಾಷಿಂಗ್ಟನ್ ಸುಂದರ್ ಕೈಬಿಡಲಾಗಿದೆ.

ಇದನ್ನೂ ಓದಿ:ಐಪಿಎಲ್‌ ಹರಾಜು; 292 ಕ್ರಿಕೆಟಿಗರಿಗೆ ಸೀಮಿತ

ಪ್ರೇಕ್ಷಕರಿಗೆ ಅವಕಾಶ: ಇಂದಿನ ಪಂದ್ಯದಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಚೆನ್ನೈನಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವುದೇ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ.

ಇಂಗ್ಲೆಂಡ್‌ ತಂಡದಲ್ಲಿ 4 ಬದಲಾವಣೆ: ಸಾಮಾನ್ಯವಾಗಿ ಗೆಲುವಿನ ತಂಡವನ್ನು ಬದಲಿಸದೇ ಇರುವುದು ಕ್ರಿಕೆಟ್‌ ಸಂಪ್ರದಾಯ. ಆದರೆ 227 ರನ್‌ ಜಯಭೇರಿ ಮೊಳಗಿಸಿದ ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಬದಲಾವಣೆಗಳನ್ನು ಮಾಡಿದೆ! ಕಳೆದ ಪಂದ್ಯದ ಬೌಲಿಂಗ್‌ ಹೀರೋಗಳಾದ ಜೇಮ್ಸ್‌ ಆ್ಯಂಡರ್ಸನ್‌, ಜೋಫ್ರಾ ಆರ್ಚರ್‌, ಡಾಮಿನಿಕ್‌ ಬೆಸ್‌ ಅವರನ್ನು ಇಂಗ್ಲೆಂಡ್‌ ಕೈಬಿಟ್ಟಿದೆ. ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ತವರಿಗೆ ಮರಳಿದ್ದಾರೆ.

ಇವರಲ್ಲಿ ಆ್ಯಂಡರ್ಸನ್‌ ಮತ್ತು ಬೆಸ್‌ ಅವರನ್ನು ರೊಟೇಶನ್‌ ಪದ್ಧತಿ ಹಾಗೂ ಹೆಚ್ಚಿನ ಒತ್ತಡದಿಂದ ಮುಕ್ತಗೊಳಿಸುವ ಸಲುವಾಗಿ ಹೊರಗಿಡಲಾಗಿದೆ. ಇವರ ಬದಲು ಸ್ಟುವರ್ಟ್‌ ಬ್ರಾಡ್‌ ಮತ್ತು ಮೊಯಿನ್‌ ಅಲಿ ಅವರನ್ನು ಸೇರಿಸಿ ಕೊಳ್ಳಲಾಗಿದೆ. ವೇಗಿ ಆರ್ಚರ್‌ ಗಾಯಾಳಾದ ಕಾರಣ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ವೇಗಿ ಓಲೀ ಸ್ಟೋನ್‌ ಆಯ್ಕೆಯಾಗಿದ್ದಾರೆ. ಬಟ್ಲರ್‌ ಬದಲು ಬೆನ್‌ ಫೋಕ್ಸ್‌ ವಿಕೆಟ್‌ ಕೀಪಿಂಗ್‌ ನಡೆಸಲಿದ್ದಾರೆ.

ತಂಡಗಳು

ಭಾರತ: ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಇಶಾಂತ್‌ ಶರ್ಮ, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್‌: ಡೊಮಿನಿಕ್‌ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಓಲೀ ಪೋಪ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ಮೊಯಿನ್‌ ಅಲಿ, ಸ್ಟುವರ್ಟ್‌ ಬ್ರಾಡ್‌, ಓಲೀ ಸ್ಟೋನ್‌, ಜಾಕ್‌ ಲೀಚ್

ಟಾಪ್ ನ್ಯೂಸ್

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.