ಅ.ಭಾ. ಅಂತರ್ ವಿ.ವಿ. ಬಾಲ್ ಬ್ಯಾಡ್ಮಿಂಟನ್ : ಮೇಲುಗೈ ಸಾಧಿಸಿದ ಮಂಗಳೂರು ವಿ.ವಿ.
Team Udayavani, Jan 16, 2023, 11:34 PM IST
ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖೀಲ ಭಾರತ ಅಂತರ್ ವಿ.ವಿ. ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ. ತಂಡವು ಸೆಮಿಫೈನಲ್ ಲೀಗ್ನಲ್ಲಿ ಮೇಲುಗೈ ಸಾಧಿಸಿದೆ.
ಕ್ವಾರ್ಟರ್ಫೈನಲ್ನಲ್ಲಿ ಅಣ್ಣಾಮಲೈ ವಿ.ವಿ. ಯನ್ನು ಮಣಿಸಿ ಸೆಮಿಫೈನಲ್ ಲೀಗ್ ಹಂತಕ್ಕೇರಿದ ಮಂಗಳೂರು ವಿ.ವಿ. ತಂಡವು ಅಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಂಧ್ರ ವಿ.ವಿ. ತಂಡವನ್ನು 35-29, 35-25 ಅಂಕಗಳಿಂದ ಮಣಿಸಿದೆ. ಇನ್ನೊಂದು ಲೀಗ್ ಪಂದ್ಯದಲ್ಲಿ ಎಸ್ಆರ್ಎಂ ತಂಡವು ಅಣ್ಣಾ ವಿ.ವಿ. ತಂಡವನ್ನು 35-15, 35-27 ಅಂಕಗಳಿಂದ ಸೋಲಿಸಿತ್ತು.
ಈ ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಣ್ಣಾ ವಿ.ವಿ. ತಂಡವು ಬಿ.ಎಸ್. ಅಬ್ದುಲ್ ರಹ್ಮಾನ್ ಕ್ರೆಸೆಂಟ್ ವಿ.ವಿ.ಯನ್ನು 35-28, 32-35, 35-19 ಅಂಕಗಳಿಂದ, ಮಂಗ ಳೂರು ವಿ.ವಿ. ತಂಡವು ಅಣ್ಣಾಮಲೈ ವಿ.ವಿ.ಯನ್ನು 35-21, 35-30 ಅಂಕಗಳಿಂದ ಮಣಿಸಿ ಲೀಗ್ ಪ್ರವೇಶಿಸಿದವು. ಆಂಧ್ರ ವಿ.ವಿ. ತಂಡವು ಮದ್ರಾಸ್ ವಿ.ವಿ. ತಂಡವನ್ನು 20-35, 35-29, 35-21 ಅಂಕಗಳಿಂದ, ಎಸ್ಆರ್ಎಂ ತಂಡವು ಭಾರತೀಯರ್ ವಿ.ವಿ. ತಂಡವನ್ನು 37-35, 35-19 ಅಂಕಗಳಿಂದ ಮಣಿಸಿ ಸೆಮಿಫೈನಲ್ನ ಲೀಗ್ ಹಂತಕ್ಕೆ ಪ್ರವೇಶಿಸಿದವು.
ಬೆಳಗ್ಗೆ ನಡೆದ ಪ್ರೀ -ಕ್ವಾರ್ಟರ್ ಫೈನಲ್ನಲ್ಲಿ ಅಣ್ಣಾ ವಿ.ವಿ. ತಂಡವು ಕೇರಳ ವಿ.ವಿ. ತಂಡವನ್ನು ಮಣಿಸಿತು. ಅಣ್ಣಾಮಲೈ ವಿ.ವಿ. ತಂಡವು ಆಚಾರ್ಯ ನಾಗಾರ್ಜುನ ವಿ.ವಿ.ಯನ್ನು, ಮದ್ರಾಸ್ ವಿ.ವಿ. ತಂಡವು ಭಾರತೀದಾಸ್ ವಿ.ವಿ.ಯನ್ನು ಹಾಗೂ ಭಾರತೀಯಾರ್ ವಿ.ವಿ. ತಂಡವು ಪೆರಿಯಾರ್ ವಿ.ವಿ. ತಂಡವನ್ನು ಅಂಕಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ