ಬಿಸಿಸಿಐ, ಶ್ರೀನಿಗೆ ದಂಡ ವಿಧಿಸಿದ ಇ.ಡಿ.
Team Udayavani, Jun 1, 2018, 6:00 AM IST
ಮುಂಬಯಿ: ವಿದೇಶಿ ವಿನಿಮಯ ನೀತಿ ಉಲ್ಲಂ ಸಿದ ಕಾರಣ ಬಿಸಿಸಿಐ, ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ಜಾರಿ ನಿರ್ದೇಶನಾಲಯ ಒಟ್ಟು 121.56 ಕೋಟಿ ರೂ. ದಂಡ ವಿಧಿಸಿದೆ. ಇದರಲ್ಲಿ ಬಿಸಿಸಿಐ ಪಾಲು 82.66 ಕೋಟಿ ರೂ., ಶ್ರೀನಿವಾಸನ್ ಪಾಲು 11.53 ಕೋಟಿ ರೂ., ಲಲಿತ್ ಮೋದಿ ಪಾಲು 10.65 ಕೋಟಿ ರೂ., ಎಂ.ಪಿ. ಪಾಂಡೋವ್ ಪಾಲು 9.72 ಕೋಟಿ ರೂ. ಆಗಿದೆ.
ದಂಡಕ್ಕೇನು ಕಾರಣ?
2009ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇದ್ದ ಕಾರಣ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಲಾಗಿತ್ತು. ಆಗ ಪಂದ್ಯ ಗಳನ್ನು ನಡೆಸಲು ಒಟ್ಟು 243 ಕೋಟಿ ರೂ. ಮೊತ್ತವನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿತ್ತು. ಈ ಹಂತದಲ್ಲಿ ಸ್ಪಷ್ಟವಾಗಿ ವಿದೇಶಿ ವಿನಿಮಯ ನೀತಿಯನ್ನು ಸಂಪೂರ್ಣವಾಗಿ ಉಲ್ಲಂಘೀಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.