IPL 2020: CSK-SRH ; ಗೆಲುವಿನ ಹಳಿ ಏರಿದ ಸೂಪರ್‌ ಕಿಂಗ್ಸ್‌

Team Udayavani, Oct 13, 2020, 11:26 PM IST

IPL

ದುಬಾೖ: ಅಲ್ಪ ಮೊತ್ತ ಪೇರಿಸಿದರೂ ತನ್ನ ಬಿಗು ಬೌಲಿಂಗ್‌ ದಾಳಿಯ ನೆರವಿನಿಂದ ಎದುರಾಳಿ ಹೈದರಾಬಾದ್‌ ತಂಡವನ್ನು 147 ರನ್‌ಗಳಿಗೆ ಕಟ್ಟಿ ಹಾಕುವ ಮೂಲಕ ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಗೆಲುವಿನ ನಗೆ ಬೀರಿದೆ. ಚೆನ್ನೈ ಈ ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿತ್ತು. ಈ ಗೆಲುವಿನೊಂದಿಗೆ ಚೆನ್ನೈ ತಾನಾಡಿದ 8 ಪಂದ್ಯಗಳಿಂದ 6 ಅಂಕ ಪಡೆದು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ಶೇನ್‌ ವಾಟ್ಸನ್‌ ಮತ್ತು ಅಂಬಾಟಿ ರಾಯುಡು ಅವರ ರಕ್ಷಣಾತ್ಮಕ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 167 ರನ್‌ ಪೇರಿಸಿ ಹೈದರಾಬಾದ್‌ಗೆ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟಿಗೆ 147 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಹೈದರಾಬಾದ್‌ ಪರ ಕೇನ್‌ ವಿಲಿಯಮ್ಸನ್‌ ಅರ್ಧಶತಕ ಸಿಡಿಸಿ ಏಕಾಂಗಿಯಾಗಿ ಹೋರಾಟ ನಡೆಸಿದರು. ವಿಲಿಯಮ್ಸನ್‌ ಗಳಿಕೆ 57 ರನ್‌.

ಚೆನ್ನೈ ಸೂಪರ್‌ ಕಿಂಗ್ಸ್‌ನ ಆರಂಭವೇನೂ ಉತ್ತಮವಾಗಿರಲಿಲ್ಲ ತಂಡದ ಮೊತ್ತ 10 ರನ್‌ ಆಗುವಷ್ಟರಲ್ಲಿ ಡು ಪ್ಲೆಸಿಸ್‌ ವಿಕೆಟ್‌ ಕಳೆದುಕೊಂಡಿತು. ದ್ವಿತೀಯ ಸ್ಪೆಲ್‌ ಎಸೆಯಲು ಬಂದ ಸಂದೀಪ್‌ ಶರ್ಮ ಈ ವಿಕೆಟ್‌ ಬೇಟೆಯಾಡಿದರು.

ಆರಂಭಿಕನಾಗಿ ಭಡ್ತಿ ಹೊಂದಿ ಆಡಲಿಳಿದ ಸ್ಯಾಮ್‌ ಕರನ್‌ ಖಲೀಲ್‌ ಅಹ್ಮದ್‌ ಎಸೆದ ದ್ವಿತೀಯ ಓವರ್‌ನಲ್ಲಿ ತಲಾ ಎರಡು ಸಿಕ್ಸರ್‌ ಹಾಗೂ ಬೌಂಡರಿ ಬಾರಿಸುವ ಮೂಲಕ ಬಿರುಸಿನ ಬ್ಯಾಟಿಂಗ್‌ ನಡೆಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಮತ್ತೆ ದಾಳಿಗಿಳಿದ ಸಂದೀಪ್‌ ಶರ್ಮ ಯಾರ್ಕರ್‌ ಎಸೆತವೊಂದನ್ನು ಎಸೆದು ಕರನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. 21 ಎಸೆತ ಎದುರಿಸಿದ ಅವರು ಮೂರು ಬೌಂಡರಿ, ಎರಡು ಸಿಕ್ಸರ್‌ ನೆರವಿನಿಂದ 31 ರನ್‌ ಸಿಡಿಸಿದರು.

ವಾಟ್ಸನ್‌-ರಾಯುಡು ಎಚ್ಚರಿಕೆಯ ಆಟ
ಪವರ್‌ ಪ್ಲೇ ಅವಧಿಯಲ್ಲಿ ಚೆನ್ನೈ ಎರಡು ವಿಕೆಟ್‌ ಕಳೆದುಕೊಂಡು 44 ರನ್‌ ಕಲೆಹಾಕಿತು. ಅಪಾಯದಲ್ಲಿದ್ದ ತಂಡಕ್ಕೆ ಶೇನ್‌ ವಾಟ್ಸನ್‌ ಮತ್ತು ಅಂಬಾಟಿ ರಾಯುಡು ಆಸರೆಯಾಗಿ ಎಚ್ಚರಿಕೆ ಆಟವಾಡತೊಡಗಿದರು. ಓವರ್‌ಗೆ ಒಂದರಂತೆ ಸಿಕ್ಸರ್‌, ಬೌಂಡರಿ ಬಾರಿಸುತ್ತ
ತಂಡದ ಮೊತ್ತವನ್ನು ಬೆಳೆಸತೊಡಗಿದರು. ಆದರೆ 14 ಓವರ್‌ ಬಳಿಕ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್‌ಗೆ ಮುಂದಾದ ಶೇನ್‌ ವಾಟ್ಸನ್‌ ಮತ್ತು ಅಂಬಾಟಿ ರಾಯುಡು ಜೋಡಿಯನ್ನು 16ನೇ ಓವರ್‌ನಲ್ಲಿ ಖಲೀಲ್‌ ಅಹ್ಮದ್‌ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಈ ಜೋಡಿಯಿಂದ 3ನೇ ವಿಕೆಟಿಗೆ 81 ರನ್‌ ಒಟ್ಟುಗೂಡಿತು. ರಾಯುಡು ಗಳಿಕೆ 34 ಎಸೆತಗಳಿಂದ 41 ರನ್‌ (3 ಬೌಂಡರಿ, 2 ಸಿಕ್ಸರ್‌).

ಧೋನಿ, ಡ್ವೇನ್‌ ಬ್ರಾವೊ ಮತ್ತೆ ವಿಫ‌ಲ
ರಾಯುಡು ವಿಕೆಟ್‌ ಪತನದ ಬೆನ್ನಲ್ಲೆ ಶೇನ್‌ ವಾಟ್ಸನ್‌ ಟಿ. ನಟರಾಜನ್‌ ಅವರ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಲಾಂಗ್‌ ಆಫ್ನಲ್ಲಿದ್ದ ಮನೀಷ್‌ ಪಾಂಡೆಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಹಾದಿ ಹಿಡಿದರು. 42 ರನ್‌ಗಳಿಸಿದ ಅವರು ಕೇವಲ 8 ರನ್‌ಗಳ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಧೋನಿ (21), ವಿಂಡೀಸ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ (0) ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಜಡೇಜ ಅಜೇಯರಾಗಿ ಉಳಿದು 25 ರನ್‌ ಸೂರೆಗೈದರು.

ಹೈದರಾಬಾದ್‌ ಪರ ಸಂದೀಪ್‌ ಶರ್ಮ 19 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಉರುಳಿಸಿದರು. ಉಳಿದಂತೆ ಟಿ. ನಟರಾಜನ್‌, ಖಲೀಲ್‌ ಅಹ್ಮದ್‌ ತಲಾ ಎರಡು ವಿಕೆಟ್‌ ಪಡೆದರು. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಅಫ್ಘಾನ್‌ ಸಿನ್ನರ್‌ ರಶೀದ್‌ ಖಾನ್‌ ಅವರ ಸ್ಪಿನ್‌ ಮೋಡಿ ಈ ಪಂದ್ಯದಲ್ಲಿ ಕೈಹಿಡಿಯಲಿಲ್ಲ 4 ಓವರ್‌ ಎಸೆದು ವಿಕೆಟ್‌ ಲೆಸ್‌ ಎನಿಸಿದರು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌

ಸ್ಯಾಮ್‌ ಕರನ್‌ ಬಿ ಸಂದೀಪ್‌ 31
ಫಾ ಡು ಪ್ಲೆಸಿಸ್‌ ಸಿ ಬೇರ್‌ಸ್ಟೊ ಬಿ ಸಂದೀಪ್‌ 0
ಶೇನ್‌ ವಾಟ್ಸನ್‌ ಸಿ ಪಾಂಡೆ ಬಿ ನಟರಾಜನ್‌ 42
ರಾಯುಡು ಸಿ ವಾರ್ನರ್‌ ಬಿ ಖಲೀಲ್‌ 41
ಧೋನಿ ಸಿ ವಿಲಿಯಮ್ಸನ್‌ ಬಿ ನಟರಾಜನ್‌ 21
ಜಡೇಜ ಔಟಾಗದೆ 25
ಡ್ವೇನ್‌ ಬ್ರಾವೊ ಬಿ ಖಲೀಲ್‌ 0
ದೀಪಕ್‌ ಚಹರ್‌ ಔಟಾಗದೆ 2

ಇತರ 5
ಒಟ್ಟು ( 20 ಓವರ್‌ಗಳಲ್ಲಿ 6 ವಿಕೆಟಿಗೆ) 167
ವಿಕೆಟ್‌ ಪತನ: 1-10, 2-35, 3-116, 4-120, 5-152, 6-152.

ಬೌಲಿಂಗ್‌
ಸಂದೀಪ್‌ ಶರ್ಮ 4-0-19-2
ಖಲೀಲ್‌ ಅಹ್ಮದ್‌ 4-0-45-2
ನದೀಮ್‌ 4-0-29-0
ಟಿ. ನಟರಾಜನ್‌ 4-0-41-2
ರಶೀದ್‌ ಖಾನ್‌ 4-0-30-0

ಹೈದರಾಬಾದ್‌
ವಾರ್ನರ್‌ ಸಿ ಮತ್ತು ಬಿ ಕರನ್‌ 9
ಬೇರ್‌ಸ್ಟೊ ಬಿ ಜಡೇಜ 23
ಮನೀಷ್‌ ಪಾಂಡೆ ರನೌಟ್‌ 4
ವಿಲಿಯಮ್ಸನ್‌ ಸಿ ಠಾಕೂರ್‌ ಬಿ ಶರ್ಮ 57
ಪ್ರಿಯಂ ಗರ್ಗ್‌ ಸಿ ಜಡೇಜ ಬಿ ಶರ್ಮ 16
ವಿಜಯ್‌ ಶಂಕರ್‌ ಸಿ ಜಡೇಜ ಬಿ ಬ್ರಾವೊ 12
ರಶೀದ್‌ ಖಾನ್‌ ಹಿಟ್‌ ವಿಕೆಟ್‌ 14
ನದೀಮ್‌ ಸಿ ಮತ್ತು ಬಿ 5
ಸಂದೀಪ್‌ ಶರ್ಮ ಔಟಾಗದೆ 1
ಟಿ. ನಟರಾಜನ್‌ ಔಟಾಗದೆ 0

ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 147
ವಿಕೆಟ್‌ ಪತನ: 1-23, 2-27, 3-59, 4-99, 5-117, 6-126, 7-146, 8-146.

ಬೌಲಿಂಗ್‌
ದೀಪಕ್‌ ಚಹರ್‌ 4-0-28-0
ಸ್ಯಾಮ್‌ ಕರನ್‌ 3-0-18-1
ರವೀಂದ್ರ ಜಡೇಜ 3-0-21-1
ಶಾದೂìಲ್‌ ಠಾಕೂರ್‌ 2-0-10-1
ಕರಣ್‌ ಶರ್ಮ 4-0-37-2
ಡ್ವೇನ್‌ ಬ್ರಾವೊ 3-0-25-2
ಪಿಯೂಷ್‌ ಚಾವ್ಲಾ 1-0-8-0

ಟಾಪ್ ನ್ಯೂಸ್

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ICC World Cup; Visa problem for Pakistan cricket team to come to India

ICC World Cup; ಭಾರತಕ್ಕೆ ಬರಲು ಪಾಕ್ ಕ್ರಿಕೆಟ್ ತಂಡಕ್ಕೆ ವೀಸಾ ಸಮಸ್ಯೆ; ಪ್ರಯಾಣ ವಿಳಂಬ

ವಿರಾಟ್-ಧೋನಿ ಮಾಡಿರದ ಸಾಧನೆ ಮಾಡಿದ ಕೆಎಲ್ ರಾಹುಲ್

INDvsAUS; ವಿರಾಟ್-ಧೋನಿ ಮಾಡಿರದ ಸಾಧನೆ ಮಾಡಿದ ಕೆಎಲ್ ರಾಹುಲ್

ICC Ranking: ವಿಶ್ವಕ್ರಿಕೆಟ್ ಗೆ ಭಾರತವೇ ಸಾಮ್ರಾಟ; ಮೂರು ಮಾದರಿಯಲ್ಲಿ ಟೀಂಇಂಡಿಯಾ ನಂಬರ್ 1

ICC Ranking: ವಿಶ್ವಕ್ರಿಕೆಟ್ ಗೆ ಭಾರತವೇ ಸಾಮ್ರಾಟ; ಮೂರು ಮಾದರಿಯಲ್ಲಿ ಟೀಂಇಂಡಿಯಾ ನಂಬರ್ 1

1-as-dasdas

Asian Games ಎಂಬ ಮಾಯಾಲೋಕ ; ಇಂದು ಸಂಜೆ 5.30ಕ್ಕೆ ಉದ್ಘಾಟನೆ 

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

police crime

Ganesh Festival: ಲಕ್ಕಿಡಿಪ್ ಬಹುಮಾನ ಮದ್ಯದ ಬಾಟಲ್; ಯುವಕನಿಗೆ ಪೊಲೀಸರ ಎಚ್ಚರಿಕೆ

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.