Udayavni Special

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!


Team Udayavani, Sep 24, 2020, 11:02 PM IST

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ದುಬಾಯಿ: ಇಂದಿನ IPL ಲೀಗ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ RCB ತಂಡವನ್ನು ಧೂಳೀಪಠ ಮಾಡಿದ್ದಾರೆ.

ಅಜೇಯ ಶತಕದಾಟದ ಮೂಲಕ ಮಿಂಚಿದ್ದ ರಾಹುಲ್ ತಮ್ಮ ತಂಡ 206 ರನ್ ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಆದರೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾದ RCB ದಾಂಢಿಗರು ಯಾವುದೇ ಹಂತದಲ್ಲಿ ಪ್ರತಿರೋಧ ತೋರದೆ ಕಿಂಗ್ಸ್ ಪಂಜಾಬ್ ಎದುರು 97 ರನ್ ಗಳ ಘೋರ ಪರಾಜಯ ಅನುಭವಿಸಿದರು.

ಪಂಜಾಬ್ ಬೌಲರ್ ಗಳ ಶಿಸ್ತಿನ ಬೌಲಿಂಗ್ ಗೆ ಮಕಾಡೆ ಮಲಗಿದ RCB ಬ್ಯಾಟಿಂಗ್ ಪಡೆ 17 ಓವರ್ ಗಳಲ್ಲಿ 109 ರನ್ ಗಳಿಗೆ ಆಲೌಟ್ ಆಗುವ ಮೂಲಕ 97 ರನ್ ಗಳ ಸೋಲು ಅನುಭವಿಸಿತು.

ಇದನ್ನೂ ಓದಿ: ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ರಾಹುಲ್ ಒಬ್ಬರೇ ಬಾರಿಸಿದಷ್ಟು ರನ್ RCB ತಂಡ ಬಾರಿಸಲಾಗದ್ದು ಚಾಲೆಂಜರ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಬೃಹತ್ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ RCB ಬ್ಯಾಟ್ಸ್ ಮನ್ ಗಳು ಯಾವುದೇ ಹಂತದಲ್ಲೂ ಪ್ರತಿರೋಧವನ್ನು ತೋರಲೇ ಇಲ್ಲ. ಕಳೆದ ಪಂದ್ಯದ ಹೀರೋ ದೇವದತ್ತ ಪಡಿಕ್ಕಲ್ ಇಂದು ಎರಡೇ ಎಸೆತ ಎದುರಿಸಿ ಔಟಾದರು. ಅವರ ಕೊಡುಗೆ 01 ರನ್. ಬಳಿಕ ಜೋಸ್ ಫಿಲಿಪ್ (0), ವಿರಾಟ್ ಕೊಹ್ಲಿ (01) ಬೆನ್ನು ಬೆನ್ನಿಗೇ ಔಟಾದಾಗ RCB ಮೊತ್ತ 4 ರನ್!

ಈ ಹಂತದಲ್ಲಿ ಜೊತೆಯಾದ ಅರೋನ್ ಫಿಂಚ್ (20) ಹಾಗೂ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ (28) ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ 50 ರನ್ ಹರಿದು ಬಂತು.


ಆದರೆ, 8ನೇ ಓವರ್ ನಲ್ಲಿ ಫಿಂಚ್ ಔಟಾಗುವುದರೊಂದಿಗೆ RCB ರನ್ ಚೇಸಿಂಗ್ ಗೆ ಮತ್ತೆ ಗ್ರಹಣ ಹಿಡಿಯಿತು. ನಾಲ್ಕು ರನ್ ಗಳ ಅಂತರದಲ್ಲಿ ಎಬಿಡಿ ಸಹ ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (30) ಹಾಗೂ ಶಿವಂ ದುಬೆ (12) ಸ್ವಲ್ಪ ಪ್ರತಿರೋ‍ಧ ತೋರಿದರಾದರೂ ಬೆಟ್ಟದಷ್ಟಿದ್ದ ಗುರಿಯ ಮುಂದೆ ಇದು ಸಾಲದಾಯಿತು.

ಅಂತಿಮವಾಗಿ RCB 17 ಓವರ್ ಗಳಲ್ಲಿ 109 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಗಿ 97 ರನ್ ಗಳಿಂದ ಸೋಲೊಪ್ಪಿಕೊಂಡಿತು.

ಕಿಂಗ್ಸ್ ಪಂಜಾಬ್ ಪರ ರವಿ ಬಿಷ್ಣೊಯ್ ಮತ್ತು ಮುರುಗನ್ ಅಶ್ವಿನ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಸೆಲ್ಯೂಟ್ ಬೌಲರ್ ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಪಡೆದರು. ಮಹಮ್ಮದ್ ಶಮಿ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಉರುಳಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

jds

ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಎಸ್ ಅಕ್ಕಿ ಕಾಂಗ್ರೆಸ್ ಸೇರ್ಪಡೆ

01

ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ…

puneeth

ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2020 : ಇಂದು ಕಾಂಗರೂ ಕಪ್ತಾನರ ಫೈಟ್‌

IPL 2020 : ಇಂದು ಕಾಂಗರೂ ಕಪ್ತಾನರ ಫೈಟ್‌

ನಾಯಕರಿಗೇಕೆ 2 ಕ್ಯಾಪ್‌?

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ

IPLIPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

IPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

KOLAR-TDY-2

ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

KOLAR-TDY-1

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

cb-tdy-2

ಅಭಿವೃದ್ಧಿ ಮಾಡಿ ತೋರಿಸುವ ಪಕ್ಷ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.