ಸೋಲಿನ ಸುಳಿಯಲ್ಲಿರುವ SRH ತಂಡಕ್ಕೆ ಬಿಗ್ ಶಾಕ್: IPLನಿಂದ ಹೊರಬಿದ್ದ ಖ್ಯಾತ ಆಲ್ ರೌಂಡರ್
Team Udayavani, Apr 27, 2023, 12:26 PM IST
ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸ್ಟಾರ್ ಆಲ್ ರೌಂಡರ್ ಆಟಗಾರರೊಬ್ಬರ ಗಾಯದ ಸಮಸ್ಯೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಾಷಿಂಗ್ಟನ್ ಸುಂದರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್ ಉಳಿದ ಪಂದ್ಯದಿಂದ ಹೊರ ಬಿದ್ದಿದ್ದಾರೆ.
ಆರಂಭಿಕ ಪಂದ್ಯಗಳಲ್ಲಿ ಅಷ್ಟಾಗಿ ಕಮಾಲ್ ಮಾಡದ ಸುಂದರ್, ಕಳೆದ ಡೆಲ್ಲಿ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿಂದ ಮೋಡಿ ಮಾಡಿದ್ದರು. ಇನ್ನೇನು ತಮ್ಮ ಲಯ ಕಂಡುಕೊಂಡರು ಎನ್ನುವಾಗಲೇ ಅವರಿಗೆ (Hamstring injury) ಮಂಡಿರಜ್ಜು ಗಾಯವಾಗಿದ್ದು,ಇದರಿಂದ ಅವರು ಐಪಿಎಲ್ ನ ಉಳಿದ ಭಾಗಕ್ಕೆ ಅವರು ಲಭ್ಯವಾಗುವುದಿಲ್ಲ ಎಂದು ಸನ್ರೈಸರ್ಸ್ ಹೈದರಾಬಾದ್ ತಂಡ ಅವರ ಗಾಯದ ಬಗ್ಗೆ ಅಪ್ಡೇಟ್ ನೀಡಿದೆ.
ಈ ಬಾರಿ ಅವರು 7 ಪಂದ್ಯವನ್ನಾಡಿದ್ದು, 60 ರನ್ ಗಳಿಸಿ 3 ವಿಕೆಟ್ ಗಳನ್ನು ಪಡೆದಿದ್ದರು. ಸಿಎಸ್ ಕೆ ವಿರುದ್ಧದ ಸೋಲಿನ ಬಳಿಕ ಹೈದರಾಬಾದ್ ತಂಡದ ಮುಖ್ಯ ತರಬೇತುದಾರ ಬ್ರಿಯಾನ್ ಲಾರಾ ವಾಷಿಂಗ್ಟನ್ ನಮ್ಮ ತಂಡದ ಮುಖ್ಯ ಆಲ್ ರೌಂಡರ್ ಎಂದು ಹೇಳಿದ್ದರು.
🚨 INJURY UPDATE 🚨
Washington Sundar has been ruled out of the IPL 2023 due to a hamstring injury.
Speedy recovery, Washi 🧡 pic.twitter.com/P82b0d2uY3
— SunRisers Hyderabad (@SunRisers) April 27, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ