
ಹೈದರಾಬಾದ್ ಸವಾಲಿಗೆ ರಾಜಸ್ಥಾನ ಸಜ್ಜು: ಟಾಸ್ ಗೆದ್ದ ಭುವಿ, ಬೌಲಿಂಗ್ ಆಯ್ಕೆ
Team Udayavani, Apr 2, 2023, 3:16 PM IST

ಹೈದರಾಬಾದ್: ಕಳೆದ ವರ್ಷದ ದ್ವಿತೀಯ ಸ್ಥಾನಿ ರಾಜಸ್ಥಾನ ರಾಯಲ್ಸ್ ತಂಡವು ಈ ಸೀಸನ್ ನ ಮೊದಲ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಆಡುತ್ತಿದೆ. ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ನಾಯಕ ಏಡನ್ ಮಾಕ್ರಮ್ ಇನ್ನೂ ತಂಡ ಕೂಡಿಕೊಳ್ಳದ ಕಾರಣದಿಂದ ಭುವನೇಶ್ವರ್ ಕುಮಾರ್ ಅವರು ಇಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ಫಾರೂಖಿ, ಹ್ಯಾರಿ ಬ್ರೂಕ್, ಆದಿಲ್ ರಶೀದ್ ಮತ್ತು ಗ್ಲೆನ್ ಫಿಲಿಪ್ ಅವರು ವಿದೇಶಿ ಆಟಗಾರರಾಗಿದ್ದಾರೆ.
ಕಳೆದ ಬಾರಿ ಕೈತಪ್ಪಿದ್ದ ಟ್ರೋಫಿ ಗೆಲ್ಲಲು ಸಂಜು ಸ್ಯಾಮ್ಸನ್ ಪಡೆ ತಯಾರಿ ಮಾಡಿಕೊಂಡಿದೆ. ಬಟ್ಲರ್, ಹೋಲ್ಡರ್, ಟ್ರಂಟ್ ಬೌಲ್ಟ್ ಮತ್ತು ಹೆಟ್ಮೈರ್ ಅವರು ನಾಲ್ವರು ವಿದೇಶಿ ಆಟಗಾರರಾಗಿದ್ದಾರೆ.
ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾ/ವಿ.ಕೀ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್.
ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್ (ವಿ.ಕೀ), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ (ನಾ), ಟಿ ನಟರಾಜನ್, ಫಜಲ್ಹಕ್ ಫಾರೂಕಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
