ಐಪಿಎಲ್ ಸೀಸನ್-16: ಫ್ರಾಂಚೈಸಿಗಳ ಹರಾಜು ಮೊತ್ತ ಹೆಚ್ಚಳ
Team Udayavani, Oct 17, 2022, 11:08 PM IST
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ಮುಕ್ತಾಯದ ಹಂತದಲ್ಲಿ ಐಪಿಎಲ್ ಸೀಸನ್ 16ರ ಆರಂಭಿಕ ಹಂತದ ಸಿದ್ಧತೆ ಮೊದಲ್ಗೊಳ್ಳಲಿದೆ. ಇದರಂತೆ ಫ್ರಾಂಚೈಸಿಗಳ ಹರಾಜು ಮೊತ್ತವನ್ನು 90 ಕೋಟಿ ರೂ.ಗಳಿಂದ 95 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಡಿ. 16ರಂದು ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.
ನ. 15ರೊಳಗೆ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಯಾದಿಯನ್ನು ನೀಡಲು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚಿಸಿದೆ.
ಐಪಿಎಲ್ ಆಡುತ್ತಿರುವ ಬಹುತೇಕ ಆಟಗಾರು ಟಿ20 ವಿಶ್ವಕಪ್ನಲ್ಲಿ ನಿರತರಾಗಿದ್ದಾರೆ.