IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

200 ರನ್‌ ಅನುಮಾನ? ಮಳೆ ಬಂದರೆ ?

Team Udayavani, May 21, 2024, 6:55 AM IST

1-adsadasdas

ಅಹ್ಮದಾಬಾದ್‌: ಐಪಿಎಲ್‌ನ 70 ಲೀಗ್‌ ಪಂದ್ಯಗಳು ಸಮಾಪ್ತಿಯಾಗಿದ್ದು, ಪ್ಲೇ ಆಫ್ ಸುತ್ತಿನ ಕ್ಷಣಗಣನೆ ಆರಂಭವಾಗಿದೆ. 10 ತಂಡಗಳಲ್ಲಿ ಆರರ ಆಟ ಮುಗಿದಿದೆ. 4 ತಂಡಗಳಷ್ಟೇ ಕಣದಲ್ಲಿವೆ. ಇವುಗಳಲ್ಲಿ ಟೇಬಲ್‌ ಟಾಪರ್‌ ಕೋಲ್ಕತಾ ನೈಟ್‌ರೈಡರ್ ಮತ್ತು ದ್ವಿತೀಯ ಸ್ಥಾನಿ ಸನ್‌ರೈಸರ್ ಹೈದರಾಬಾದ್‌ ತಂಡಗಳು ಮಂಗಳವಾರದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿವೆ. ಪಂದ್ಯದ ತಾಣ ಅಹ್ಮದಾಬಾದ್‌.

ಇಲ್ಲೇ ಆಡಲಾಗುವ ಬುಧವಾರದ ಎಲಿಮಿ ನೇಟರ್‌ ಮುಖಾಮುಖೀಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಸೆಣಸಲಿವೆ. ಇಲ್ಲಿ ಪರಾಭ ವಗೊಂಡ ತಂಡ ಕೂಟದಿಂದ ನಿರ್ಗಮಿಸಲಿದೆ.

ಈ ನಾಲ್ಕರಲ್ಲಿ 3 ತಂಡಗಳು ಈಗಾಗಲೇ ಪ್ರಶಸ್ತಿ ಎತ್ತಿವೆ. ಕೆಕೆಆರ್‌ 2 ಸಲ, ಹೈದರಾಬಾದ್‌ ಒಮ್ಮೆ (ಡೆಕ್ಕನ್‌ ಸೇರಿದರೆ 2 ಸಲ) ಚಾಂಪಿಯನ್‌ ಆಗಿವೆ. ರಾಜಸ್ಥಾನ್‌ ಐಪಿಎಲ್‌ ಇತಿಹಾಸದ ಪ್ರಪ್ರಥಮ ಚಾಂಪಿಯನ್‌ ತಂಡ. ಆರ್‌ಸಿಬಿ ಮಾತ್ರ ಇನ್ನೂ ಪ್ರಶಸ್ತಿಯ ಹುಡುಕಾಟದಲ್ಲೇ ಇದೆ.

ಕೆಕೆಆರ್‌ ಮತ್ತು ಹೈದರಾಬಾದ್‌ ರವಿವಾರದ ಕೊನೆಯ ಲೀಗ್‌ ಪಂದ್ಯದ ಬಳಿಕ ಸಾವಿರಕ್ಕೂ ಅಧಿಕ ಕಿ.ಮೀ. ಸಂಚರಿಸಿ ಅಹ್ಮದಾಬಾದ್‌ಗೆ ಬಂದಿಳಿದಿವೆ. ಕೊನೆಯ ನಿಲ್ದಾಣ ಚೆನ್ನೈ. ಪ್ಲೇ ಆಡುತ್ತಿರುವ ನಾಲ್ಕೂ ತಂಡಗಳ ಪಾಲಿಗೆ ಇವೆರಡೂ ತವರು ತಾಣಗಳಲ್ಲ ಎಂಬುದು ವಿಶೇಷ. ಹೀಗಾಗಿ ಎಲ್ಲರೂ ಒತ್ತಡವಿಲ್ಲದೆ ಆಡಬಹುದಾಗಿದೆ.

ಸಾಲ್ಟ್ ಇಲ್ಲದ ಕೆಕೆಆರ್‌
ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಬಹಳ ಬೇಗನೇ ಮೊದಲ ಸ್ಥಾನವನ್ನು ಗಟ್ಟಿಗೊಳಿಸಿದ ತಂಡ. 14ರಲ್ಲಿ ಅತ್ಯಧಿಕ 9 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿದೆ. 2 ಪಂದ್ಯಗಳು ಮಳೆಯಿಂದ ಕೊಚ್ಚಿಹೋಗಿವೆ.

ಈ ಬಾರಿಯ ಯಶಸ್ವಿ ಆರಂಭಕಾರ, ಇಂಗ್ಲೆಂಡ್‌ನ‌ ಫಿಲ್‌ ಸಾಲ್ಟ್ ಗೈರು ಕೆಕೆಆರ್‌ಗೆ ಎದುರಾಗಿರುವ ದೊಡ್ಡ ಹೊಡೆತ. 435 ರನ್‌ ಗಳಿಸಿ ಕೆಕೆಆರ್‌ ಪರ ದ್ವಿತೀಯ ಸ್ಥಾನದಲ್ಲಿದ್ದರು. ಇವರ ಹಾಗೂ ಸುನೀಲ್‌ ನಾರಾಯಣ್‌ (461 ರನ್‌) ಜೋಡಿಯ ಆರಂಭ ಕೋಲ್ಕತಾದ ಈವರೆಗಿನ ಯಶಸ್ವಿ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾಲ್ಟ್ ಬದಲು ರೆಹಮಾನುಲ್ಲ ಗುರ್ಬಜ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ರಾಜಸ್ಥಾನ್‌ ಪಂದ್ಯ ಮಳೆಯಿಂದ ರದ್ದುಗೊಂಡ ಪರಿಣಾಮ, ಗುರ್ಬಜ್‌ ಫಾರ್ಮ್ ಅರಿಯುವ ಅವಕಾಶವೊಂದು ತಪ್ಪಿತು.

ನಾಯಕ ಶ್ರೇಯಸ್‌ ಅಯ್ಯರ್‌ (287 ರನ್‌) ಈವರೆಗೆ ಅಷ್ಟು ಪರಿಣಾಮ ಬೀರಿಲ್ಲ. ಆದರೆ ನಿತೀಶ್‌ ರಾಣಾ, ರಘುವಂಶಿ, ರಸೆಲ್‌, ವೆಂಕಟೇಶ್‌ ಅಯ್ಯರ್‌ ಆಗಾಗ ಮ್ಯಾಚ್‌ ವಿನ್ನಿಂಗ್‌ ಸಾಧನೆಯಿಂದ ಗಮನ ಸೆಳೆದಿದ್ದಾರೆ. ಆದರೆ ರಿಂಕು ಸಿಂಗ್‌ ಮಂಕಾಗಿದ್ದಾರೆ.

ಕೆಕೆಆರ್‌ ಬೌಲಿಂಗ್‌ ವಿಭಾಗದಲ್ಲೂ ಸುನೀಲ್‌ ನಾರಾಯಣ್‌ ಅವರೇ ಹೀರೋ. ಸ್ಟಾರ್ಕ್‌, ಅರೋರಾ, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ ಮೇಲೆ ನಂಬಿಕೆ ಇಡಬಹುದಾಗಿದೆ. ಹೈದರಾಬಾದ್‌ಗೆ ಹೋಲಿಸಿದರೆ ಕೋಲ್ಕತಾದ ಬೌಲಿಂಗ್‌ ಹೆಚ್ಚು ಬಲಿಷ್ಠ ಹಾಗೂ ವೈವಿಧ್ಯಮಯ.

ಹೈದರಾಬಾದ್‌ ಅನಿಶ್ಚಿತ ಆಟ
ಕಳೆದ ಸಲ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದ್ದ ಸನ್‌ರೈಸರ್ ಹೈದರಾಬಾದ್‌ ಈ ಬಾರಿ “ರನ್‌’ರೈಸರ್ ಹೈದರಾಬಾದ್‌ ಆಗಿ ಪರಿವರ್ತನೆಗೊಂಡಿದೆ. ಅತ್ಯಧಿಕ ರನ್ನಿನ ಐಪಿಎಲ್‌ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಇದು ಟ್ರಾÂವಿಸ್‌ ಹೆಡ್‌ (533 ರನ್‌), ಅಭಿಷೇಕ್‌ ಶರ್ಮ (467 ರನ್‌)ಮತ್ತು ಹೆನ್ರಿಚ್‌ ಕ್ಲಾಸೆನ್‌ (381 ರನ್‌) ಅವರ ಅಬ್ಬರದ ಬ್ಯಾಟಿಂಗ್‌ ಫ‌ಲ. ಕೆಕೆಆರ್‌ ವಿರುದ್ಧವೂ ಈ ಮೂವರ ಆಟವೇ ನಿರ್ಣಾಯಕವಾಗಲಿದೆ.

ಹೈದರಾಬಾದ್‌ ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಮಾತ್ರ ರನ್‌ ಪ್ರವಾಹ ಹರಿಸುವ ತಂಡ ಎಂಬ ಅಪವಾದ ಹೊತ್ತಿತ್ತು. ಆದರೆ ಲಕ್ನೋ ವಿರುದ್ಧ ಸಾಧಿಸಿದ ನೋಲಾಸ್‌ ಜಯದಿಂದ ಈ ಅಪವಾದದಿಂದ ಮುಕ್ತವಾಗಿದೆ. ಆದರೆ ತಂಡದ ಬೌಲಿಂಗ್‌ ಅಷ್ಟೊಂದು ವೈವಿಧ್ಯಮಯವಲ್ಲ. ಕಮಿನ್ಸ್‌, ಭುವನೇಶ್ವರ್‌, ನಟರಾಜನ್‌, ಮಾರ್ಕಂಡೆ, ಉನಾದ್ಕತ್‌ ಮ್ಯಾಜಿಕ್‌ ಮಾಡಬೇಕಾದ ತುರ್ತು ಅಗತ್ಯವಿದೆ.

200 ರನ್‌ ಅನುಮಾನ?
ಈ ಬಾರಿಯ ಐಪಿಎಲ್‌ನಲ್ಲಿ 200 ರನ್ನುಗಳ ಸುರಿಮಳೆಯೇ ಆಗಿತ್ತು. ಆದರೆ ಅಹ್ಮದಾಬಾದ್‌ನಲ್ಲಿ ಬೃಹತ್‌ ಸ್ಕೋರ್‌ ದಾಖಲಾಗುವುದು ಅನುಮಾನ. ಇಲ್ಲಿನ 12 ಇನ್ನಿಂಗ್ಸ್‌ಗಳಲ್ಲಿ ಮೊತ್ತ ಇನ್ನೂರರ ಗಡಿ ದಾಟಿದ್ದು ಕೇವಲ 2 ಸಲ. ಅಲ್ಲದೇ ಇಲ್ಲಿನ “ಬೌಂಡರಿ’ ಕೂಡ ದೊಡ್ಡದು. ಹೀಗಾಗಿ ಬೌಲರ್‌ಗಳಿಗೆ ಇಲ್ಲಿ ತುಸು ರಿಲೀಫ್ ಸಿಗಬಹುದೆಂಬ ನಂಬಿಕೆ ಇದೆ. ಅಹ್ಮದಾಬಾದ್‌ನಲ್ಲಿ ಸೆಕೆಂಡ್‌ ಬ್ಯಾಟಿಂಗ್‌ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದ ದಾಖಲೆ ಹೊಂದಿದೆ.

ಮಳೆ ಬಂದರೆ ಹೆಚ್ಚುವರಿ ಅವಧಿ
ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ.

ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇಲ್ಲಿ ಕೋಲ್ಕತಾಕ್ಕೆ ಲಾಭವಾಗಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಇದೇ ಸ್ಥಿತಿ ಎದುರಾದರೆ ರಾಜಸ್ಥಾನ್‌ ರಾಯಲ್ಸ್‌ ಮುನ್ನಡೆಯಲಿದೆ.

ಸಂಭಾವ್ಯ ತಂಡಗಳು
ಕೆಕೆಆರ್‌: ರೆಹಮಾನುಲ್ಲ ಗುರ್ಬಜ್‌, ಸುನೀಲ್‌ ನಾರಾಯಣ್‌, ವೆಂಕಟೇಶ್‌ ಅಯ್ಯರ್‌, ಶ್ರೇಯಸ್‌ ಅಯ್ಯರ್‌ (ನಾಯಕ), ಅಂಗ್‌ಕೃಶ್‌ ರಘುವಂಶಿ, ಆ್ಯಂಡ್ರೆ ರಸೆಲ್‌, ರಿಂಕು ಸಿಂಗ್‌, ರಮಣ್‌ದೀಪ್‌ ಸಿಂಗ್‌, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ.
ಇಂಪ್ಯಾಕ್ಟ್ ಸಬ್‌: ವೈಭವ್‌ ಅರೋರ
ಹೈದರಾಬಾದ್‌: ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮ, ನಿತೀಶ್‌ ರೆಡ್ಡಿ, ಹೆನ್ರಿಚ್‌ ಕ್ಲಾಸೆನ್‌, ಅಬ್ದುಲ್‌ ಸಮದ್‌, ಶಾಬಾಜ್‌ ಅಹ್ಮದ್‌, ಸನ್ವೀರ್‌ ಸಿಂಗ್‌, ಪ್ಯಾಟ್‌ ಕಮಿನ್ಸ್‌ (ನಾಯಕ), ಭುವನೇಶ್ವರ್‌ ಕುಮಾರ್‌, ಜೈದೇವ್‌ ಉನಾದ್ಕತ್‌, ಮಾಯಾಂಕ್‌ ಮಾರ್ಕಂಡೆ.
ಇಂಪ್ಯಾಕ್ಟ್ ಸಬ್‌: ಟಿ. ನಟರಾಜನ್‌.

ಕೆಕೆಆರ್‌ ಪ್ಲೇ ಆಫ್/ನಾಕೌಟ್‌ ಸಾಧನೆ
ವರ್ಷ ಲೀಗ್‌ ಪ್ಲೇ ಆಫ್
2011 4ನೇ ಸ್ಥಾನ ಎಲಿಮಿನೇಟರ್‌ ಸೋಲು
2012 2ನೇ ಸ್ಥಾನ ಚಾಂಪಿಯನ್‌
2014 2ನೇ ಸ್ಥಾನ ಚಾಂಪಿಯನ್‌
2016 4ನೇ ಸ್ಥಾನ ಎಲಿಮಿನೇಟರ್‌ ಸೋಲು
2017 3ನೇ ಸ್ಥಾನ ಕ್ವಾಲಿಫೈಯರ್‌-2 ಸೋಲು
2018 3ನೇ ಸ್ಥಾನ ಕ್ವಾಲಿಫೈಯರ್‌-2 ಸೋಲು
2021 4ನೇ ಸ್ಥಾನ ರನ್ನರ್ ಅಪ್‌
ಒಟ್ಟು: ಪಂದ್ಯ-13, ಗೆಲುವು-08, ಸೋಲು-05

ಹೈದರಾಬಾದ್‌ ಪ್ಲೇ ಆಫ್/ನಾಕೌಟ್‌ ಸಾಧನೆ
ವರ್ಷ ಲೀಗ್‌ ಪ್ಲೇ ಆಫ್
2013 4ನೇ ಸ್ಥಾನ ಎಲಿಮಿನೇಟರ್‌ ಸೋಲು
2016 3ನೇ ಸ್ಥಾನ ಚಾಂಪಿಯನ್‌
2017 3ನೇ ಸ್ಥಾನ ಎಲಿಮಿನೇಟರ್‌ ಸೋಲು
2018 1ನೇ ಸ್ಥಾನ ರನ್ನರ್ ಅಪ್‌
2019 4ನೇ ಸ್ಥಾನ ಎಲಿಮಿನೇಟರ್‌ ಸೋಲು
2020 3ನೇ ಸ್ಥಾನ ಕ್ವಾಲಿಫೈಯರ್‌-2 ಸೋಲು
ಒಟ್ಟು : ಪಂದ್ಯ-11, ಗೆಲುವು-05, ಸೋಲು-06

ಟಾಪ್ ನ್ಯೂಸ್

7-uv-fusion

UV Fusion: ಭಾವನೆಗಳು ಮಾರಾಟಕ್ಕಿವೆ…

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

Chikmagalur: ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

Rain

Karnataka: ಭಾರಿ ಮಳೆ ಮುನ್ಸೂಚನೆ, ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Desi Swara: ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ವಿಟ್ಜ್ ರ್ ಲ್ಯಾಂಡ್‌…

Desi Swara: ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ವಿಟ್ಜ್ ರ್ ಲ್ಯಾಂಡ್‌…

Belagavi: ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಮೃತ್ಯು

Belagavi: ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಮೃತ್ಯು

ನಿರ್ಮಾಣ ಹಂತದಲ್ಲಿದ್ದ YSRP ಕೇಂದ್ರ ಕಚೇರಿ ಧ್ವಂಸ; ಸೇಡಿನ ರಾಜಕಾರಣ ಮಾಡುತ್ತಿದೆ ಎಂದ ಜಗನ್

ನಿರ್ಮಾಣ ಹಂತದಲ್ಲಿದ್ದ YSRP ಕೇಂದ್ರ ಕಚೇರಿ ಧ್ವಂಸ; NDA ಸೇಡಿನ ರಾಜಕಾರಣ ಮಾಡುತ್ತಿದೆ; ಜಗನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

T20 Blast: Marnus Labuschagne takes a brilliant catch; Watch the video

T20 Blast: ಅತ್ಯದ್ಭುತ ಕ್ಯಾಚ್ ಪಡೆದ ಮಾರ್ನಸ್ ಲಬುಶೇನ್; ವಿಡಿಯೋ ನೋಡಿ

1-sadsdas

Super-8; ವಿಂಡೀಸ್‌-ಅಮೆರಿಕ: ಆತಿಥೇಯರ ಸಮರ

1-aaaawee

Super-8; ಭಾರತದ ಭೀತಿಯಲ್ಲಿ ಬಾಂಗ್ಲಾ ಟೈಗರ್

1–dsdasdas

2036ರ ಒಲಿಂಪಿಕ್ಸ್‌ ಗೆ ಕಬಡ್ಡಿ , ಯೋಗ?

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

7-uv-fusion

UV Fusion: ಭಾವನೆಗಳು ಮಾರಾಟಕ್ಕಿವೆ…

Minister Shivraj Thangadagi deeply mourns the demise of Dr. Kamala Hampana

ಡಾ.ಕಮಲಾ ಹಂಪನಾ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ

6-school

UV Fusion: ಮರಳಿ ಶಾಲೆಗೆ

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

Chikmagalur: ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.