ಫಿಫಾ ವಿಶ್ವಕಪ್ 2022: ರಾಷ್ಟ್ರಗೀತೆ ಹಾಡಲಿಲ್ಲ ಇರಾನ್ ಆಟಗಾರರು!
Team Udayavani, Nov 22, 2022, 9:41 AM IST
ದೋಹಾ: ಫಿಫಾ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಇರಾನ್ ತಂಡದ ಆಟಗಾರರು ಪದ್ಧತಿ ಯಂತೆ ರಾಷ್ಟ್ರಗೀತೆ ಹಾಡಲು ನಿಂತಿದ್ದೇನೋ ಸರಿ. ಆದರೆ ನಿರೀಕ್ಷೆ ಹುಸಿ ಯಾಯಿತು. ಅವರು ರಾಷ್ಟ್ರಗೀತೆ ವೇಳೆ ದನಿಗೂಡಿಸಲು ನಿರಾಕರಿಸಿ ಮೌನವಹಿಸಿದರು! ಇದು ಬಹುತೇಕರಿಗೆ ಅಚ್ಚರಿಯಾಗಿ ಕಾಣಲಿಲ್ಲ. ಇದಕ್ಕೂ ಕಾರಣವಿದೆ!
ಮೈದಾನದಲ್ಲಿದ್ದ ಇರಾನ್ ಅಭಿಮಾನಿಗಳು ರಾಷ್ಟ್ರಗೀತೆಯನ್ನು ಗುನುಗುತ್ತಿದ್ದರೂ, ಕೆಲ ಅಭಿಮಾನಿಗಳು ಮಹಿಳೆ ಯರ ಮೇಲೆ ಇರಾನ್ ಆಡಳಿತ ಮಾಡುತ್ತಿರುವ ದೌರ್ಜನ್ಯವನ್ನು ವಿರೋಧಿಸುವ ಭಿತ್ತಿಪತ್ರವನ್ನು ಹಿಡಿದಿದ್ದರು. ಈ ದೌರ್ಜನ್ಯವನ್ನು ವಿರೋಧಿಸಿಯೇ ಆಟಗಾರರು ಸುಮ್ಮನೆ ನಿಂತಿದ್ದು. ಸದ್ಯ ಇರಾನ್‌ನಾದ್ಯಂತ ನೂರಾರು ಮಂದಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮಗಳು ಜಾರಿ
ಸೆಪ್ಟೆಂಬರ್‌ನಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಹಿಜಾಬ್ ಧರಿಸದೇ ಇದ್ದದ್ದಕ್ಕೆ ಆಕೆಯನ್ನು ಟೆಹ್ರಾನ್ ನಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಠಾಣೆಯಲ್ಲಿ ವಿಪರೀತ ಥಳಿಸಿದ್ದರಿಂದ ಆಕೆ ಮೃತಪಟ್ಟಿದ್ದರು. ಇದು ಆ ದೇಶದ ಮಹಿಳೆಯರನ್ನು ರೊಚ್ಚಿಗೆಬ್ಬಿಸಿದೆ. ಹಿಜಾಬ್ ಹಾಕು ವುದಿಲ್ಲವೆಂದು ಬೀದಿಗಿಳಿದಿದ್ದಾರೆ. ಇದರ ಪರಿಣಾಮ ದೇಶಾದ್ಯಂತ ಕಾನೂನು ವ್ಯವಸ್ಥೆ ನಿಯಂತ್ರಣ ತಪ್ಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್