
ಹಿಜಾಬ್ ಧರಿಸದೇ ಚೆಸ್ ಆಡಿದ ಇರಾನ್ ಆಟಗಾರ್ತಿ
Team Udayavani, Dec 29, 2022, 8:32 PM IST

ಅಲ್ಮಾಟಿ: ಇರಾನ್‌ನಲ್ಲಿ ಹಿಜಾಬನ್ನು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಸ್ವತಃ ಇರಾನ್ ಫುಟ್‌ಬಾಲ್ ತಂಡ ವಿಶ್ವಕಪ್‌ನಲ್ಲೇ ರಾಷ್ಟ್ರಗೀತೆ ಹಾಡದಿರುವ ಮೂಲಕ ವಿರೋಧ ತೋರಿದೆ. ಇದೀಗ ಇರಾನಿನ ಚೆಸ್ ಆಟಗಾರ್ತಿ ಸಾರಾ ಖಾದೆಮ್ ಹಿಜಾಬ್ ಧರಿಸಿದೇ ವಿಶ್ವ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.
ಇರಾನ್ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಇಲ್ಲದೇ ಕಾಣಿಸಿಕೊಳ್ಳುವಂತೆಯೇ ಇಲ್ಲ! ಸಾರಾ ಖಾದೆಮ್ ಈ ನಡೆ ವಿಶ್ವಾದ್ಯಂತ ಸುದ್ದಿಯಾಗಿದೆ.
ಇರಾನ್‌ನಲ್ಲಿ ಸೆಪ್ಟೆಂಬರ್ ಮಧ್ಯಭಾಗದಿಂದ ಅಲ್ಲಿನ ಇಸ್ಲಾಮ್ ಆಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಖುರ್ದಿಷ್ ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ಮಾಹ್ಸಾ ಅಮಿನಿ ಎಂಬ 22 ವರ್ಷದ ಮಹಿಳೆಯನ್ನು ಹಿಜಾಬ್ ಧರಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಆಕೆ ಠಾಣೆಯಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಇರಾನ್‌ನಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ.
ಟಾಪ್ ನ್ಯೂಸ್
