ಜಪಾನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ಗೆ ಪ್ರಣಯ್
Team Udayavani, Sep 1, 2022, 9:32 PM IST
ಒಸಾಕಾ: ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಮತ್ತೋರ್ವ ಆಟಗಾರ ಕೆ. ಶ್ರೀಕಾಂತ್ ಪರಾಭವಗೊಂಡರು.
ಕಳೆದ ವಾರವಷ್ಟೇ ವಿಶ್ವ ಚಾಂಪಿಯನ್ಶಿಪ್ ಕ್ವಾರ್ಟರ್ ಫೈನಲ್ ತಲುಪಿದ್ದ ಎಚ್.ಎಸ್. ಪ್ರಣಯ್, 8ನೇ ಶ್ರೇಯಾಂಕದ ಲೋಹ್ ಕೀನ್ ವ್ಯೂ ಅವರನ್ನು ಕಠಿಣ ಹೋರಾಟದ ಬಳಿಕ 22-20, 21-19 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದು ಸಿಂಗಾಪುರದ ಆಟಗಾರನೆದುರು ಪ್ರಣಯ್ ಸಾಧಿಸಿದ 3ನೇ ಗೆಲುವು. ಇವರ ಮುಂದಿನ ಎದುರಾಳಿ, ವಿಶ್ವ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿರುವ ಚೈನೀಸ್ ತೈಪೆಯ ಚೌ ಟೀನ್ ಚೆನ್. ಕಳೆದ ವಾರದ ವಿಶ್ವ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಚೆನ್ ಕಂಚಿನ ಪದಕ ಜಯಿಸಿದ್ದರು. ಪ್ರಣಯ್ ರ್ಯಾಂಕಿಂಗ್ ಯಾದಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ.
ಹಿಂದಿನ ಪಂದ್ಯದಲ್ಲಿ ಮಲೇಷ್ಯಾದ 5ನೇ ರ್ಯಾಂಕಿಂಗ್ ಆಟಗಾರ ಲೀ ಜೀ ಜಿಯಾ ಅವರಿಗೆ ಆಘಾತ ನೀಡಿದ್ದ ಕೆ. ಶ್ರೀಕಾಂತ್ ಜಪಾನ್ನ ಕಂಟ ಸುನೆಯಾಮ ಅವರೆದುರು 10-21, 18-21 ಅಂತರದಿಂದ ಪರಾಭವಗೊಂಡರು. ಇದಕ್ಕೂ ಹಿಂದೆ ಇವರಿಬ್ಬರು 2019ರ ಕೊರಿಯನ್ ಓಪನ್’ನಲ್ಲಿ ಮುಖಾಮುಖೀಯಾಗಿದ್ದರು. ಆಗಲೂ ಶ್ರೀಕಾಂತ್ ಪರಾಭವಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್