
ಜಪಾನ್ ಓಪನ್ ಬ್ಯಾಡ್ಮಿಂಟನ್: ಪ್ರಣಯ್‌ಗೆ ಸೋಲು
Team Udayavani, Sep 2, 2022, 11:38 PM IST

ಒಸಾಕಾ: ಭಾರತದ ಶಟ್ಲರ್ ಎಚ್. ಎಸ್. ಪ್ರಣಯ್ ಜಪಾನ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ತೀವ್ರ ಸೆಣಸಾಟ ನಡೆಸಿ ಚೈನೀಸ್ ತೈಪೆಯ ಚೊ ಟಿಯೆನ್ ಚೆನ್ ಅವರಿಗೆ ಶರಣಾಗಿ ಹೊರಬಿದ್ದಿದ್ದಾರೆ. ಚೆನ್ ವಿಶ್ವ ಚಾಂಪಿಯನ್‌ಶಿಪ್‌ನ ಕಂಚು ಪದಕ ಜಯಿಸಿದ್ದರು.
30ರ ಹರೆಯದ ಪ್ರಣಯ್ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ ಅಂತಿಮವಾಗಿ 21-17, 15-21, 22-20 ಗೇಮ್‌ಗಳಿಂದ ಚೆನ್ ಅವರೆದುರು ಸೋಲು ಒಪ್ಪಿಕೊಂಡರು. ಈ ಹೋರಾಟ ಒಂದು ತಾಸು ಮತ್ತು 20 ನಿಮಿಷಗಳವರೆಗೆ ಸಾಗಿತ್ತು. ಚೆನ್ ವಿರುದ್ಧದ ಈ ಹಿಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಪ್ರಣಯ್ ಈ ಪಂದ್ಯದಲ್ಲೂ ಮೊದಲ ಗೇಮ್ ಗೆದ್ದು ಮೇಲುಗೈ ಸಾಧಿಸಿದ್ದರು. ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದ ಚೆನ್ ಉತ್ತಮ ಹೋರಾಟ ಸಂಘಟಿಸಿ ಗೆದ್ದರು.
ನಿರ್ಣಾಟಕ ಗೇಮ್‌ನಲ್ಲಿ ಇಬ್ಬರೂ ಪ್ರತಿಯೊಂದು ಅಂಕ ಗಳಿಸಲು ಪ್ರಬಲವಾಗಿ ಹೋರಾಡಿದರು. ಕೊನೆ ಹಂತದವರೆಗೂ ಸಮಬಲದ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಚೆನ್ 22-20ರಿಂದ ಗೆಲುವಿನ ನಗೆ ಚೆಲ್ಲಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
