ಲಾರ್ಡ್ಸ್‌ ಟೆಸ್ಟ್‌ ಗೆದ್ದ ಇಂಗ್ಲೆಂಡ್‌: ಜೋ ರೂಟ್‌ ಅಜೇಯ ಶತಕ; 10 ಸಾವಿರ ರನ್‌ ಸಾಧನೆ

Team Udayavani, Jun 5, 2022, 10:50 PM IST

ಲಾರ್ಡ್ಸ್‌ ಟೆಸ್ಟ್‌ ಗೆದ್ದ ಇಂಗ್ಲೆಂಡ್‌: ಜೋ ರೂಟ್‌ ಅಜೇಯ ಶತಕ; 10 ಸಾವಿರ ರನ್‌ ಸಾಧನೆ

ಲಂಡನ್‌: ಮಾಜಿ ನಾಯಕ ಜೋ ರೂಟ್‌ ಅವರ ಅಜೇಯ ಶತಕ ಹಾಗೂ 10 ಸಾವಿರ ರನ್‌ ಸಾಧನೆಯಿಂದ ರಂಗೇರಿಸಿಕೊಂಡ ನ್ಯೂಜಿಲ್ಯಾಂಡ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ನೂತನ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ನೂತನ ಕೋಚ್‌ ಬ್ರೆಂಡನ್‌ ಮೆಕಲಮ್‌ ಶುಭಾರಂಭ ಮಾಡಿದಂತಾಯಿತು.

ಗೆಲುವಿಗೆ 277 ರನ್‌ ಸವಾಲು ಪಡೆದಿದ್ದ ಇಂಗ್ಲೆಂಡ್‌, ಒಂದು ಹಂತದಲ್ಲಿ 69ಕ್ಕೆ 4 ವಿಕೆಟ್‌ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆಗ ಕ್ರೀಸ್‌ ಆಕ್ರಮಿಸಿಕೊಂಡ ಜೋ ರೂಟ್‌ ಮತ್ತು ಬೆನ್‌ ಸ್ಟೋಕ್ಸ್‌ 5ನೇ ವಿಕೆಟಿಗೆ 90 ರನ್‌ ಪೇರಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು. ಸ್ಟೋಕ್ಸ್‌ 54 ರನ್‌ ಬಾರಿಸಿ ಕಪ್ತಾನನ ಆಟವಾಡಿದರು.

3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ 5ಕ್ಕೆ 216 ರನ್‌ ಬಾರಿಸಿ ಗೆಲುವಿನತ್ತ ಮುಖ ಮಾಡಿತ್ತು. ರೂಟ್‌ 77 ಮತ್ತು ಫೋಕ್ಸ್‌ 9 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. 4ನೇ ದಿನವಾದ ರವಿವಾರ ಇಂಗ್ಲೆಂಡ್‌ ಯಾವುದೇ ವಿಕೆಟ್‌ ಕಳೆದುಕೊಳ್ಳದೆ ದಡ ಮುಟ್ಟಿತು. ಆಗ ಜೋ ರೂಟ್‌ 115 ರನ್‌, ಬೆನ್‌ ಫೋಕ್ಸ್‌ 32 ರನ್‌ ಬಾರಿಸಿ ಅಜೇಯರಾಗಿದ್ದರು.
170 ಎಸೆತಗಳನ್ನು ಎದುರಿಸಿದ ಜೋ ರೂಟ್‌ 115 ರನ್ನುಗಳ ಸ್ಮರಣೀಯ ಇನ್ನಿಂಗ್ಸ್‌ ಒಂದನ್ನು ಕಟ್ಟಿದರು. ಅವರ 26ನೇ ಶತಕ ಹಾಗೂ 10 ಸಾವಿರ ರನ್‌ ಸಾಧನೆ ಒಟ್ಟೊಟ್ಟಿಗೆ ಆದುದೊಂದು ವಿಶೇಷ. ರೂಟ್‌ 10 ಸಾವಿರ ರನ್‌ ಗಳಿಸಿದ ವಿಶ್ವದ 14ನೇ ಹಾಗೂ ಇಂಗ್ಲೆಂಡಿನ ಕೇವಲ 2ನೇ ಕ್ರಿಕೆಟಿಗ. ಅಲಸ್ಟೇರ್‌ ಕುಕ್‌ ಮೊದಲಿಗ (12,472 ರನ್‌).
ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ 0-4 ಆ್ಯಶಸ್‌ ಸರಣಿ ಸೋಲಿನ ಸಂಕಟದಿಂದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಜೋ ರೂಟ್‌, ಈಗ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಗೆಲುವಿನ ರೂವಾರಿಯಾಗಿ ಮೂಡಿಬಂದದ್ದು ಇಂಗ್ಲೆಂಡ್‌ ಪಾಲಿನ ಮಹತ್ವದ ಸಂಗತಿಯಾಗಿದೆ.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲ್ಯಾಂಡ್‌-132 ಮತ್ತು 285. ಇಂಗ್ಲೆಂಡ್‌-141 ಮತ್ತು 5 ವಿಕೆಟಿಗೆ 279 (ರೂಟ್‌ ಔಟಾಗದೆ 115, ಸ್ಟೋಕ್ಸ್‌ 54, ಪೋಕ್ಸ್‌ ಔಟಾಗದೆ 32, ಜೇಮಿಸನ್‌ 79ಕ್ಕೆ 4). ಪಂದ್ಯಶ್ರೇಷ್ಠ: ಜೋ ರೂಟ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಜೋ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರೈಸಿದ ವಿಶ್ವದ 14ನೇ, ಇಂಗ್ಲೆಂಡಿನ 2ನೇ ಕ್ರಿಕೆಟಿಗನೆನಿಸಿದರು. ಅಲಸ್ಟೇರ್‌ ಕುಕ್‌ ಮೊದಲಿಗ (12,472).
– ಜೋ ರೂಟ್‌ 10 ಸಾವಿರ ರನ್‌ ಗಳಿಸಿದ ಕಿರಿಯ ಆಟಗಾರನೆಂಬ ಕುಕ್‌ ದಾಖಲೆಯನ್ನು ಸರಿದೂಗಿಸಿದರು (ಇಬ್ಬರದೂ 31 ವರ್ಷ, 157 ದಿನ).
– ರೂಟ್‌ ನ್ಯೂಜಿಲ್ಯಾಂಡ್‌ ವಿರುದ್ಧ ಸಾವಿರ ರನ್‌ ಪೂರ್ತಿಗೊಳಿಸಿದರು. ಇದರೊಂದಿಗೆ ಒಟ್ಟು 7 ತಂಡಗಳ ವಿರುದ್ಧ ಸಾವಿರ ರನ್‌ ಪೇರಿಸಿದಂತಾಯಿತು.
– ಬೆನ್‌ ಸ್ಟೋಕ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ ಬಾರಿಸಿದ ಇಂಗ್ಲೆಂಡಿನ 3ನೇ ಕ್ರಿಕೆಟಿಗನೆನಿಸಿದರು. ಉಳಿದಿಬ್ಬರೆಂದರೆ ಇಯಾನ್‌ ಮಾರ್ಗನ್‌ (328) ಮತ್ತು ಜಾಸ್‌ ಬಟ್ಲರ್‌ (248).
– ಡ್ಯಾರಿಲ್‌ ಮಿಚೆಲ್‌ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರು (108). ಕಳೆದ ವರ್ಷ ಪಾಕಿಸ್ಥಾನ ವಿರುದ್ಧ ಅಜೇಯ 102 ರನ್‌ ಹೊಡೆದದ್ದು ಅವರ ಈವರೆಗಿನ ಅತ್ಯಧಿಕ ಗಳಿಕೆಯಾಗಿತ್ತು.
– ರೂಟ್‌ ತವರಲ್ಲಿ ಅತ್ಯಧಿಕ 15 ಶತಕ ಬಾರಿಸಿದ ಇಂಗ್ಲೆಂಡಿನ 5ನೇ ಬ್ಯಾಟರ್‌ ಎನಿಸಿದರು.
– ರೂಟ್‌ ಸಕ್ರಿಯ ಕ್ರಿಕೆಟಿಗರಲ್ಲಿ ಅತ್ಯಧಿಕ ಟೆಸ್ಟ್‌ ಬಾರಿಸಿದ 2ನೇ ಆಟಗಾರ (26). ವಿರಾಟ್‌ ಕೊಹ್ಲಿ ಮತ್ತು ಸ್ಟೀವನ್‌ ಸ್ಮಿತ್‌ ಅಗ್ರಸ್ಥಾನದಲ್ಲಿದ್ದಾರೆ (27 ಶತಕ).
-ಕೇನ್‌ ವಿಲಿಯಮ್ಸನ್‌ ಇಂಗ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ ನೆಲದಲ್ಲಿ 23.16ರ ಸರಾಸರಿಯಲ್ಲಿ 278 ರನ್‌ ಹೊಡೆದರು. ಇದರಲ್ಲಿ ಒಂದು ಶತಕ, ಒಂದು ಅರ್ಧ ಶತಕ ಸೇರಿದೆ.
-ಸ್ಟೋಕ್ಸ್‌ ಟೆಸ್ಟ್‌ ಕ್ರಿಕೆಟಿನ ಗರಿಷ್ಠ ಸಿಕ್ಸರ್‌ ಸಾಧಕರ ಯಾದಿಯಲ್ಲಿ 5ನೇ ಸ್ಥಾನಿಯಾದರು (93 ಸಿಕ್ಸರ್‌). ಈ ಸಂದರ್ಭದಲ್ಲಿ ಅವರು ವೀರೇಂದ್ರ ಸೆಹವಾಗ್‌ ದಾಖಲೆಯನ್ನು ಮುರಿದರು (91 ಸಿಕ್ಸರ್‌).
– ಜೋ ರೂಟ್‌ 2021ರಿಂದೀಚೆ ಆಡಿದ 21 ಪಂದ್ಯಗಳಲ್ಲಿ 56.20ರ ಸರಾಸರಿಯಲ್ಲಿ 2,192 ರನ್‌ ಬಾರಿಸಿದ್ದಾರೆ. ಇದರಲ್ಲಿ 9 ಶತಕ, 4 ಅರ್ಧ ಶತಕ ಸೇರಿದೆ.
– ಜೇಮ್ಸ್‌ ಆ್ಯಂಡರ್ಸನ್‌ ಅತ್ಯಧಿಕ 61 ಸಲ 4 ಪ್ಲಸ್‌ ವಿಕೆಟ್‌ ಉರುಳಿಸಿ ರಿಚರ್ಡ್‌ ಹ್ಯಾಡ್ಲಿ ಅವರ ದಾಖಲೆಯನ್ನು ಸರಿದೂಗಿಸಿದ ವೇಗದ ಬೌಲರ್‌ ಎನಿಸಿದರು.

ಟಾಪ್ ನ್ಯೂಸ್

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.