ಯಶಸ್ವಿ ಜೈಸ್ವಾಲ್ ಗೆ ವಿಶೇಷ ಗಿಫ್ಟ್ ನೀಡಿದ ಜಾಸ್ ಬಟ್ಲರ್
Team Udayavani, May 6, 2021, 7:53 AM IST
ಅಹಮದಾಬಾದ್: ಇಂಗ್ಲೆಂಡ್ ಕ್ರಿಕೆಟಿಗ ಜಾಸ್ ಬಟ್ಲರ್ ಸಹ ಆಟಗಾರ, ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿ ಪ್ರೋತ್ಸಾಹ ತುಂಬಿದ್ದಾರೆ.
ಲಂಡನ್ಗೆ ಪಯಣಿಸುವ ಮುನ್ನ ತಮ್ಮ ಬ್ಯಾಟ್ ಒಂದನ್ನು ಜೈಸ್ವಾಲ್ಗೆ ನೀಡಿದರು. “ಟು ಯಶ್, ಎಂಜಾಯ್ ಯುವರ್ ಟ್ಯಾಲೆಂಟ್. ಬೆಸ್ಟ್ ವಿಶಸ್’ ಎಂಬ ಸಂದೇಶ ಹಾಗೂ ಬಟ್ಲರ್ ಅವರ ಹಸ್ತಾಕ್ಷರವನ್ನು ಇದು ಹೊಂದಿತ್ತು.
ಮೂಲತಃ ಮುಂಬಯಿವರಾದ 19 ವರ್ಷದ ವಿಕೆಟ್ ಕೀಪರ್ ಕಂ ಓಪನರ್ ಯಶಸ್ವಿ ಜೈಸ್ವಾಲ್ ಕೊನೆಯ 3 ಲೀಗ್ ಪಂದ್ಯಗಳಲ್ಲಿ ಬಟ್ಲರ್ ಜತೆಯೇ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದರು.