ಐಪಿಎಲ್ ನಿಂದ ಹಿಂದೆ ಸರಿದ ವೇಗಿ ಹ್ಯಾಜಲ್ ವುಡ್: ಕಾಲೆಳೆದ ನೆಟ್ಟಿಗರು
Team Udayavani, Apr 1, 2021, 10:15 AM IST
ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಕೂಟಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ತಂಡಗಳು ಅಭ್ಯಾಸದಲ್ಲಿ ತೊಡಗಿದೆ. ಆದರೆ ಇದೇ ವೇಳೆಗೆ ಆಸೀಸ್ ವೇಗಿ ಜೋಶ್ ಹ್ಯಾಜಲ್ ವುಡ್ ಕೂಟದಿಂದ ಹಿಂದೆ ಸರಿದಿದ್ದು, ಚೆನ್ನೈ ಸೂಪ್ ಕಿಂಗ್ಸ್ ತಂಡಕ್ಕೆ ಶಾಕ್ ನೀಡಿದ್ದಾರೆ.
ಜೋಶ್ ತನ್ನ ಅನುಪಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದು, ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹಾಗಾಗಿ ಚೆನ್ನೈ ಫ್ರಾಂಚೈಸಿ ಹೊಸ ಆಟಗಾರನ ಹುಡುಕಾಟದಲ್ಲಿದೆ.
ಇದನ್ನೂ ಓದಿ:ಮಿಚೆಲ್ ಮಾರ್ಷ್ ಬದಲು ಜಾಸನ್ ರಾಯ್
ಕಳೆದ 10 ತಿಂಗಳಿನಿಂದ ಸತತವಾಗಿ ಕ್ವಾರಂಟೈನ್ ಮತ್ತು ಬಯೋ ಬಬಲ್ ನಲ್ಲಿದ್ದೇನೆ. ಇದು ಕಷ್ಟವಾಗಿದೆ. ಹೀಗಾಗಿ ಮುಂದಿನ ಎರಡು ತಿಂಗಳು ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದೇನೆ. ಮುಂದಿನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಸರಣಿಯನ್ನು ಎದುರು ನೋಡುತ್ತಿದ್ದೇನೆ ಎಂದು ವೇಗಿ ಹೇಳಿಕೊಂಡಿದ್ದಾರೆ.
ಕಾಲೆಳೆದ ನೆಟ್ಟಿಗರು: ಹ್ಯಾಜಲ್ ವುಡ್ ಐಪಿಎಲ್ ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಚೆನ್ನೈ ಕ್ಯಾಂಪ್ ನಲ್ಲಿ ಚೇತೆಶ್ವರ ಪೂಜಾರ ಇರುವ ಕಾರಣ ನೆಟ್ಸ್ ನಲ್ಲಿ ಪೂಜಾರಗೆ ಬಾಲ್ ಹಾಕುವ ಕಷ್ಟ ತಪ್ಪಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ: ಭಾರತ ತಂಡದಲ್ಲಿ ಉಮ್ರಾನ್ ಮಲಿಕ್
ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಒಂದೇ ಒಂದು ತಪ್ಪಿನಿಂದ ಪ್ಲೇ ಆಫ್ ಟಿಕೆಟ್ ತಪ್ಪಿಸಿಕೊಂಡ ರಿಷಭ್ ಪಂತ್
ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ