
WTC Final ಪಂದ್ಯಕ್ಕೂ ಮೊದಲು ಆಸೀಸ್ ಗೆ ಆಘಾತ: ಸ್ಟಾರ್ ಬೌಲರ್ ತಂಡದಿಂದ ಹೊರಕ್ಕೆ
Team Udayavani, Jun 4, 2023, 5:12 PM IST

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವು ಸಿದ್ದತೆ ನಡೆಸುತ್ತಿದ್ದು, ಆದರೆ ಇದೀಗ ಆಘಾತ ಎದುರಾಗಿದೆ. ವೇಗಿ ಜೋಶ್ ಹೇಜಲ್ ವುಡ್ ಅವರು ಗಾಯದ ಕಾರಣದಿಂದ ಕೂಟದಿಂದಲೇ ಹೊರಬಿದ್ದಿದ್ದಾರೆ.
ಅಕಿಲ್ಸ್ ಮತ್ತು ಅಡ್ಡ ಸಮಸ್ಯೆಯಿಂದ ಬಳಲುತ್ತಿರುವ ಹೇಜಲ್ ವುಡ್ ಬದಲಿಯಾಗಿ ಆಲ್‌ರೌಂಡರ್ ಮೈಕೆಲ್ ನೆಸರ್ ಅವರನ್ನು ಆಸ್ಟ್ರೇಲಿಯಾ ತಂಡಕ್ಕೆ ಸೇರಿಸಿದೆ.
ಬಲಗೈ ಸೀಮರ್ ಹೇಜಲ್ ವುಡ್ ಚಿಕಿತ್ಸೆಗಾಗಿ ಆಸ್ಟ್ರೇಲಿಯಾಕ್ಕೆ ಹಿಂತಿರುಗುವ ಮೊದಲು ಗಾಯದ ಕಾರಣ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ನಂಟನ್ನೂ ಮೊಟಕುಗೊಳಿಸಿದ್ದರು.
ಜೂನ್ 7ರಂದು ಓವಲ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿ.ಕೀ), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿ.ಕೀ), ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉ.ನಾ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

INDvsAUS; ಇಂದೋರ್ ನಲ್ಲಿ ಶ್ರೇಯಸ್ ಅಯ್ಯರ್- ಶುಭಮನ್ ಗಿಲ್ ಶತಕ ವೈಭವ

INDvsAUS; ಇಂಧೋರ್ ನಲ್ಲಿ ಟಾಸ್ ಗೆದ್ದ ಆಸೀಸ್; ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ

Asian Games 2023; ಮೊದಲ ದಿನವೇ ಪದಕ ಬೇಟೆ ಆರಂಭಿಸಿದ ಭಾರತ; 5 ಮೆಡಲ್ ಭಾರತದ ಪಾಲಿಗೆ