
ಕೆ.ಎಲ್. ರಾಹುಲ್ ಫಿಟ್: ಮತ್ತೆ ಏಕದಿನ ತಂಡದ ನಾಯಕ
Team Udayavani, Aug 12, 2022, 6:24 AM IST

ಹೊಸದಿಲ್ಲಿ: ಬಿಸಿಸಿಐ ವೈದ್ಯಕೀಯ ತಂಡದಿಂದ ಫಿಟ್‌ನೆಸ್ ಸರ್ಟಿಫಿಕೆಟ್ ಪಡೆದ ಕೆ.ಎಲ್. ರಾಹುಲ್ ಮರಳಿ ಭಾರತ ತಂಡದ ನಾಯಕತ್ವಕ್ಕೆ ಅಣಿಯಾಗಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿ ವೇಳೆ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಮೊದಲು ಈ ಪ್ರವಾಸಕ್ಕೆ ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು. ಈಗ ಅವರು ಉಪನಾಯಕರಾಗಿದ್ದಾರೆ. ರಾಹುಲ್ ಆಗಮನದಿಂದ ತಂಡದ ಸದಸ್ಯರ ಸಂಖ್ಯೆ 16ಕ್ಕೆ ಏರಿದೆ. ರೋಹಿತ್, ಕೊಹ್ಲಿ, ಪಂತ್, ಅಯ್ಯರ್, ಬುಮ್ರಾ ಮತ್ತು ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆ ಹಾಗೂ ಕೋವಿಡ್‌ನಿಂದಾಗಿ ರಾಹುಲ್ ಕಳೆದ ಕೆಲವು ವಾರಗಳಿಂದ ವಿಶ್ರಾಂತಿಯಲ್ಲಿದ್ದರು.
ಟಾಪ್ ನ್ಯೂಸ್
