ಟೆಸ್ಟ್ ರಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್; ಪಂತ್, ಜಡೇಜಾಗೆ ಹಿನ್ನಡೆ
Team Udayavani, Jul 1, 2021, 3:04 PM IST
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ಕ್ರಿಕೆಟ್ ನ ಹೊಸ ರಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಲವೇ ದಿನಗಳ ಹಿಂದೆ ದ್ವಿತೀಯ ಸ್ಥಾನಕ್ಕೆ ಇಳಿದಿದ್ದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ಅಗ್ರ ಸ್ಥಾನ ಸಂಪಾದಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 49 ಮತ್ತು ಅಜೇಯ 52 ರನ್ ಗಳಿಸಿದ್ದರು.
ಸದ್ಯ ಕೇನ್ ವಿಲಿಯಮ್ಸನ್ 901 ಅಂಕಗಳಿಂದ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 891 ಅಂಕ ಹೊಂದಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಫೈನಲ್ ನಲ್ಲಿ ಭಾರತ ಮತ್ತೋರ್ವ ಬ್ಯಾಟ್ಸಮನ್ ನೊಂದಿಗೆ ಆಡಬೇಕಿತ್ತು: ಪಠಾಣ್
ಕಿವೀಸ್ ಆಟಗಾರ ರಾಸ್ ಟೇಲರ್ ಅವರು ಮೂರು ಸ್ಥಾನ ಪ್ರಗತಿ ಕಂಡು 14ನೇ ಸ್ಥಾನಕ್ಕೇರಿದ್ದಾರೆ. ಡೆವೊನ್ ಕಾನ್ವೇ 18 ಸ್ಥಾನ ಮೇಲೆರಿ 42ನೇ ರಾಂಕ್ ನಲ್ಲಿದ್ದಾರೆ.
812 ಅಂಕ ಹೊಂದಿರುವ ಭಾರತೀಯ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರೋಹಿತ್ ಶರ್ಮಾ ಆರನೇ ಸ್ಥಾನದಲ್ಲಿದ್ದರೆ, ಅಂಕ ಕಳೆದುಕೊಂಡಿರುವ ಪಂತ್ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ. ಎರಡು ಸ್ಥಾನ ಕಳೆದುಕೊಂಡ ಹೆನ್ರಿ ನಿಕೋಲ್ಸ್ ಹತ್ತನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಅಜಿಂಕ್ಯ ರಹಾನೆ 13ನೇ ಸ್ಥಾನಕ್ಕೇರಿದ್ದು, ಪೂಜಾರ 16 ನೇ ಸ್ಥಾನಕ್ಕೆ ಇಳಿದಿದ್ದಾರೆ. ಆಲ್ ರೌಂಡರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ರವೀಂದ್ರ ಜಡೇಜಾ ಇದೀಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದು, ಬೆನ್ ಸ್ಟೋಕ್ಸ್ ಎರಡನೇ ರಾಂಕ್ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?