ಬ್ಯಾಡ್ಮಿಂಟನ್: ಶ್ರೀಕಾಂತ್, ಪ್ರಣಯ್ ಮುನ್ನಡೆ
Team Udayavani, Nov 18, 2021, 5:00 AM IST
ಬಾಲಿ (ಇಂಡೋನೇಶ್ಯ): ಇಂಡೋನೇಶ್ಯ ಮಾಸ್ಟರ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್, ಎಚ್.ಎಸ್. ಪ್ರಣಯ್, ಧ್ರುವ ಕಪಿಲ-ಎನ್. ಸಿಕ್ಕಿ ರೆಡ್ಡಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್, ಬಿ. ಸಾಯಿ ಪ್ರಣೀತ್ ಆಟ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ.
ಮಾಜಿ ನಂ. 1 ಆಟಗಾರ ಕೆ. ಶ್ರೀಕಾಂತ್ ಫ್ರಾನ್ಸ್‌ನ ಕ್ರಿಸ್ಟೊ ಪೊಪೋವ್ ಅವರ ಬಲವಾದ ಸವಾಲನ್ನು ಮೆಟ್ಟಿನಿಂತು 21-18, 15-21, 21-16 ಅಂತರದಿಂದ ಗೆದ್ದು ಬಂದರು. ಒಂದು ಗಂಟೆ, 15 ನಿಮಿಷ ಕಾಲ ಇವರ ಹೋರಾಟ ಸಾಗಿತು. ಈಗ 15ನೇ ರ್‍ಯಾಂಕಿಂಗ್‌ನಲ್ಲಿರುವ ಶ್ರೀಕಾಂತ್ ದ್ವಿತೀಯ ಸುತ್ತಿನಲ್ಲಿ ಆತಿಥೇಯ ನಾಡಿನ ಜೊನಾಥನ್ ಕ್ರಿಸ್ಟಿ ಸವಾಲನ್ನು ಎದುರಿಸುವ ಸಾಧ್ಯತೆ ಇದೆ.
ಎಚ್.ಎಸ್. ಪ್ರಣಯ್ ಜಿದ್ದಾಜಿದ್ದಿ ಕಾದಾಟದಲ್ಲಿ ಮಲೇಶ್ಯದ ಲ್ಯೂ ಡ್ಯಾರೆನ್ ಅವರನ್ನು 22-20, 21-19 ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಪ್ರಣಯ್ ಇನ್ನು ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಲೆಕ್ಸೆನ್ ಸವಾಲು ಎದುರಿಸಬೇಕಿದೆ.
ಇದನ್ನೂ ಓದಿ:ಟಿ20 ರ್‍ಯಾಂಕಿಂಗ್: ಒಂದು ಸ್ಥಾನ ಕುಸಿದ ರಾಹುಲ್
ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲ-ಎನ್. ಸಿಕ್ಕಿ ರೆಡ್ಡಿ 21-11, 22-20 ಅಂತರದಿಂದ ವಿಶ್ವದ 5ನೇ ಶ್ರೇಯಾಂಕದ ಇಂಡೋನೇಶ್ಯನ್ ಜೋಡಿ ಪ್ರವೀಣ್ ಜೋರ್ಡನ್-ಮೆಲಾತಿ ದೇವ ಓಕ್ತಾವಿಯಾಂತಿಗೆ ಸೋಲುಣಿಸಿದರು.
ಕಶ್ಯಪ್, ಪ್ರಣೀತ್ ಪರಾಭವ
ಪಿ. ಕಶ್ಯಪ್ ಅವರನ್ನು ಡೆನ್ಮಾರ್ಕ್‌ನ ಹಾನ್ಸ್ ಕ್ರಿಸ್ಟಿಯಾನ್ ಸೋಲ್ಬರ್ಗ್ ವಿಟ್ಟಿಂಗಸ್ 21-10, 21-19 ಅಂತರದಿಂದ ಪರಾಭವಗೊಳಿಸಿದರು. ಬಿ. ಸಾಯಿ ಪ್ರಣೀತ್ ಆತಿಥೇಯ ದೇಶದ ಶೆಸರ್ ಹಿರೆನ್ ರುಸ್ತಾವಿಟೊ ವಿರುದ್ಧ 3 ಗೇಮ್‌ಗಳ ಹೋರಾಟ ನಡೆಸಿ ಸೋಲನುಭವಿಸಿದರು (16-21, 21-14, 22-20).