ಸುಂದರ್ – ಠಾಕೂರ್ ಬ್ಯಾಟಿಂಗ್ ; ಕೊಹ್ಲಿ, ಸೆಹವಾಗ್ ಪ್ರಶಂಸೆ
Team Udayavani, Jan 18, 2021, 7:10 AM IST
ಮುಂಬಯಿ: ವಾಷಿಂಗ್ಟನ್ ಸುಂದರ್-ಶಾದೂìಲ್ ಠಾಕೂರ್ ಅವರ ಬ್ಯಾಟಿಂಗ್ ಸಾಹಸವನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್ ಮೊದಲಾದವರೆಲ್ಲ ಪ್ರಶಂಸಿಸಿದ್ದಾರೆ.
“ಇದೊಂದು ಅಸಾಮಾನ್ಯ ಸಾಧನೆ. ವಾಷಿ ಮೊದಲ ಪಂದ್ಯದಲ್ಲೇ ಅಮೋಘ ಹಿಡಿತ ಸಾಧಿಸಿದರು. ನಿನ್ನನ್ನು ಮತ್ತೆ ನಂಬಿದೆ ಠಾಕೂರ್. ಇಂಥ ಸಾಧನೆಯಿಂದಲೇ ಟೆಸ್ಟ್ ಕ್ರಿಕೆಟ್ ಗಮನ ಸೆಳೆಯುವುದು’ ಎಂದು ಕೊಹ್ಲಿ ಹೇಳಿದ್ದಾರೆ.
“2003ರ ಅಡಿಲೇಡ್ ಟೆಸ್ಟ್‌ನಲ್ಲೂ ಭಾರತ 33 ರನ್ ಲೀಡ್ ಬಿಟ್ಟುಕೊಟ್ಟಿತ್ತು. ಇಲ್ಲಿಯೂ 33 ರನ್ ಮುನ್ನಡೆ ನೀಡಿದೆ. ಒಂದು ಹಂತದಲ್ಲಿ ಭಾರತ 133 ರನ್ ಬಿಟ್ಟುಕೊಡುವ ಸ್ಥಿತಿಯಲ್ಲಿತ್ತು. ಒಟ್ಟು ಸಾವಿರದಷ್ಟು ವಿಕೆಟ್ ಕಿತ್ತ ಆಸೀಸ್‌ನ ನಾಲ್ವರು ಬೌಲರ್‌ಗಳ ದಾಳಿಯನ್ನು ಎದುರಿಸಿ ಸುಂದರ್-ಠಾಕೂರ್ ಆಡಿದ್ದೊಂದು ಮಹಾನ್ ಸಾಧನೆ. ಶಾನ್‌ದಾರ್ ಜಬರ್ದಸ್ತ್’ ಎಂಬುದು ವೀರೂ ಹೊಗಳಿಕೆ.