ಮೊಹಮ್ಮದ್ ಶಮಿಗೆ ಸಂಕಷ್ಟ: ಕೋಲ್ಕತ ಪೊಲೀಸರಿಂದ ಚಾರ್ಜ್ಶೀಟ್
Team Udayavani, Mar 14, 2019, 1:28 PM IST
ಕೋಲ್ಕತ : 2019ರ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಮುನ್ನವೇ ಭಾರತದ ವೇಗದ ಎಸೆಗಾರ ಮೊಹಮ್ಮದ್ ಶಮಿ ಅವರಿಗೆ ಈಗ ದೊಡ್ಡ ಸಂಕಟ ಎದುರಾಗಿದೆ.
ಕೋಲ್ಕತ ಪೊಲೀಸರು ಶಮಿ ವಿರುದ್ದ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ಶಮಿ ಮತ್ತು ಆತನ ಸಹೋದರನ ವಿರುದ್ಧದ ಈ ಚಾರ್ಜ್ ಶೀಟನ್ನು ಕೋಲ್ಕತ ಪೊಲೀಸರು ಆಲಿಪುರ ಕೋರ್ಟಿಗೆ ಸಲ್ಲಿಸಿದ್ದಾರೆ.
ಲಂಡನ್ನಲ್ಲಿ ವಿಶ್ವ ಕಪ್ ಕ್ರಿಕೆಟ್ ಕೂಟ ನಡೆಯಲಿದ್ದು ಶಮಿ ಅವರ ವಿಶ್ವ ಕಪ್ ಅಭಿಯಾನಕ್ಕೆ ತೊಡಕುಂಟಾಗಲಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಜೂನ್ 22ಕ್ಕೆ ನಿಗದಿಸಿದೆ.
ಶಮಿ ಅವರ ಪರಿತ್ಯಕ್ತ ಪತ್ನಿ ಹಸೀನ್ ಜಹಾನ್ ನೀಡಿರುವ ದೂರಿನ ಪ್ರಕಾರ ಕೋಲ್ಕತ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸೀನ್ ನಡುವಿನ ಕಲಹ ಕಳೆದ ವರ್ಷ ಮಾಚ್ 7ರಂದು ಬಹಿರಂಗಕ್ಕೆ ಬಂದಿತ್ತು. ಪತಿಗೆ ಅಫೇರ್ ಇದೆ ಎಂದು ಆರೋಪಿಸಿ ಆಕೆ ಸಾಮಾಜಿಕ ಮಾದ್ಯಮದಲ್ಲಿ ಸ್ಕ್ರೀನ್ ಶಾಟ್ ಅಪ್ಲೋಡ್ ಮಾಡಿದ್ದರು. ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಕೂಡ ಭಾಗಿ ಎಂದಾಕೆ ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ