ಜಿಂಬಾಬ್ವೆ ಬ್ಯಾಟಿಂಗ್ ಕೋಚ್ ಹುದ್ದೆ ತ್ಯಜಿಸಿದ ಕ್ಲೂಸ್ನರ್
Team Udayavani, Oct 9, 2022, 10:35 PM IST
ಹರಾರೆ: ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಜಿಂಬಾಬ್ವೆಯ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ತ್ಯಜಿಸಿದ್ದಾರೆ. ಜಿಂಬಾಬ್ವೆ ಮಂಡಳಿ ಜತೆಗೆ ಒಮ್ಮತದ ಒಪ್ಪಂದ ಮಾಡಿಕೊಂಡ ತತ್ಕ್ಷಣ ಕ್ಲೂಸ್ನರ್ ಹುದ್ದೆಯನ್ನು ತ್ಯಜಿಸಿದರು.
ವಿಶ್ವದಾದ್ಯಂತ ವೃತ್ತಿಪರ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕ್ಲೂಸ್ನರ್ ಈ ನಿರ್ಧಾರ ಮಾಡಿದರು ಎಂದು ಕ್ಲೂಸ್ನರ್ ಅಅವರ ಏಜೆಂಟ್ ತಿಳಿಸಿದ್ದಾರೆ. ಜಿಂಬಾಬ್ವೆಯಲ್ಲಿ ಪೂರ್ಣ ಪ್ರಮಾಣದ ಹುದ್ದೆಯಲ್ಲಿದ್ದರೆ ಅವರ ಇನ್ನಿತರ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಬಹುದು. ಇದಕ್ಕಾಗಿ ಅವರು ಹುದ್ದೆ ತ್ಯಜಿಸುತ್ತಿದ್ದಾರೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟನೆಯಲ್ಲಿ ತಿಳಿಸಿದೆ.
ಕ್ಲೂಸ್ನರ್ ಕಳೆದ ಮಾರ್ಚ್ನಲ್ಲಿ ಜಿಂಬಾಬ್ವೆಯ ಕೋಚಿಂಗ್ ಸಿಬ್ಬಂದಿಯಾಗಿ ಮರು ಸೇರ್ಪಡೆಯಾಗಿದ್ದರು. ಈ ಮೊದಲು ಅವರು 2016ರಿಂದ 2018ರ ವರೆಗೆ ಜಿಂಬಾಬ್ವೆ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು.