ಚೇತನ್- ನಿಕಿನ್ ಜೋಸ್ ಭರ್ಜರಿ ಶತಕ: ನಮೀಬಿಯಾ ವಿರುದ್ಧ ಕರ್ನಾಟಕ ರನ್ ಮಳೆ
Team Udayavani, Jun 4, 2023, 5:42 PM IST

ಎಲ್ ಆರ್ ಚೇತನ್ ( ಸಂಗ್ರಹ ಚಿತ್ರ)
ವಿಂಡ್ಹೋಕ್: ನಮೀಬಿಯಾ ಪ್ರವಾಸದಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡವು ಎರಡನೇ ಏಕದಿನ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಎಲ್ ಆರ್ ಚೇತನ್ ಮತ್ತು ನಿಕಿನ್ ಜೋಸ್ ಭರ್ಜರಿ ಶತಕ ಸಿಡಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡವು 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 360 ರನ್ ಪೇರಿಸಿದೆ.
ಬ್ಯಾಟಿಂಗ್ ಆರಂಭಿಸಿದ ಕರ್ನಾಟಕವು ಕೇವಲ 12 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರವಿಕುಮಾರ್ ಸಮರ್ಥ್ ಐದು ರನ್ ಗೆ ಔಟಾದರು. ನಂತರ ಜೊತೆಯಾದ ಚೇತನ್ ಮತ್ತು ನಿಕಿನ್ 258 ರನ್ ಜೊತೆಯಾಟವಾಡಿದರು.
ಇದನ್ನೂ ಓದಿ:IndiGo ಗುವಾಹಟಿಗೆ ಮಾರ್ಗ ಬದಲಿಸಿದ ದಿಬ್ರುಗಢ್‌ಗೆ ತೆರಳಬೇಕಿದ್ದ ವಿಮಾನ
ಎಲ್ ಆರ್ ಚೇತನ್ 147 ಎಸೆತ ಎದುರಿಸಿ 169 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು ಎಂಟು ಸಿಕ್ಸರ್ ಸಿಡಿಸಿದರು. ನಿಕಿನ್ ಜೋಸ್ ಅವರು 103 ರನ್ ಗಳಿಸಿ ಸಾಥ್ ನೀಡಿದರು.
ಉಳಿದಂತೆ ಕೃಷ್ಣಮೂರ್ತಿ ಸಿದ್ದಾರ್ಥ್ ಅವರು ಕೇವಲ 27 ಎಸೆತ ಎದುರಿಸಿ ಆರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

INDvsAUS; ಇಂದೋರ್ ನಲ್ಲಿ ಶ್ರೇಯಸ್ ಅಯ್ಯರ್- ಶುಭಮನ್ ಗಿಲ್ ಶತಕ ವೈಭವ

INDvsAUS; ಇಂಧೋರ್ ನಲ್ಲಿ ಟಾಸ್ ಗೆದ್ದ ಆಸೀಸ್; ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ

Asian Games 2023; ಮೊದಲ ದಿನವೇ ಪದಕ ಬೇಟೆ ಆರಂಭಿಸಿದ ಭಾರತ; 5 ಮೆಡಲ್ ಭಾರತದ ಪಾಲಿಗೆ