
ನಿಯಮ ಉಲ್ಲಂಘನೆ: ತಂಡದಿಂದ ದೂರ ಉಳಿಯುವಂತೆ ಹಫೀಜ್ ಗೆ ಸೂಚಿಸಿದ ಪಾಕ್ ಮಂಡಳಿ
Team Udayavani, Aug 13, 2020, 7:36 AM IST

ಸೌಥಂಪ್ಟನ್: ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿ ಹಿರಿಯ ಮಹಿಳೆಯೊಂದಿಗೆ ಫೋಟೋ ತೆಗೆದುಕೊಂಡ ಕಾರಣಕ್ಕೆ ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ ಅವರನ್ನು ತಂಡದಿಂದ ದೂರ ಉಳಿಯುವಂತೆ ಪಾಕ್ ಮಂಡಳಿ ಸೂಚಿಸಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ.
ಏಜಸ್ ಬೌಲ್ ನ ಗಾಲ್ಫ್ ಕೋರ್ಟ್ ಗೆ ಹೋಗಿದ್ದ ಮೊಹಮ್ಮದ್ ಹಫೀಜ್ ಅಲ್ಲಿ ಹಿರಿಯ ಮಹಿಳೆಯೊಂದಿಗೆ ಫೋಟೋ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ಆ ಫೋಟೋವನ್ನು ಟ್ಟಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪಿಸಿಬಿ ಶಿಸ್ತುಕ್ರಮ ಕೈಗೊಂಡಿದೆ.
ಈ ಘಟನೆಯ ನಂತರ ಹಫೀಜ್ ಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಗುರುವಾರ ಪರೀಕ್ಷಾ ಫಲಿತಾಂಶ ವರದಿ ಬರುವ ನಿರೀಕ್ಷೆಯಿದೆ. ಸದ್ಯ ಹಫೀಜ್ ರನ್ನು ತಂಡದಿಂದ ದೂರ ಉಳಿಸಿದ್ದು, ಎರಡು ಬಾರಿಯ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದ ನಂತರ ಮಾತ್ರವೇ ಅವರು ತಂಡ ಸೇರಲು ಸಾಧ್ಯ.
Met an inspirational Young lady today morning at Golf course. She is 90+ & & living her life healthy & happily.Good healthy routine ??? pic.twitter.com/3tsWSkXl1E
— Mohammad Hafeez (@MHafeez22) August 12, 2020
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ

CWC23; ಭಾರತ, ಆಸ್ಟ್ರೇಲಿಯಾ ಅಲ್ಲ…: ಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಗವಾಸ್ಕರ್

World Cup Cricket;1983ರ ಬಳಿಕ ಭಾರತದ ಮಹತ್ಸಾಧನೆ

Boxing: ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಿಖತ್ ಜರೀನ್

World Cup Cricket-2023 ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಅಭ್ಯಾಸ