ಕುಸ್ತಿಪಟು ದಾದು ಚೌಗುಲೆ ನಿಧನ
Team Udayavani, Oct 21, 2019, 5:31 AM IST
ಪುಣೆ: ರೆಸ್ಲರ್ ಲೆಜೆಂಡ್ ದಾದು ಚೌಗುಲೆ (73) ರವಿವಾರ ಕೊಲ್ಹಾಪುರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 1974ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಅವರು, ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್ ಕೇಸರಿ, ಮಹಾನ್ ಭಾರತ್ ಕೇಸರಿ ಮೊದಲಾದ ಪ್ರಶಸ್ತಿಗಳಿಗಗೆ ಭಾಜನರಾಗಿದ್ದರು. ಜೀವಮಾನದ ಸಾಧನೆಗಾಗಿ ಧ್ಯಾನ್ಚಂದ್ ಪ್ರಶಸ್ತಿಯನ್ನೂ ಪಡೆದಿದ್ದರು.