
ಫಿಫಾ 2022: ಮೊರಾಕ್ಕೊ ಐತಿಹಾಸಿಕ ಸಾಧನೆಗೆ ವಿದೇಶಿ ಆಟಗಾರರೇ ಕಾರಣ!
Team Udayavani, Dec 3, 2022, 5:25 PM IST

ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರ ಮೊರಾಕ್ಕೊ ಐತಿಹಾಸಿಕ ಸಾಧನೆ ಮಾಡಿ 16ರ ಘಟ್ಟಕ್ಕೇರಿದೆ. ಆ ದೇಶದ ಇತಿಹಾಸದಲ್ಲೇ ಕೇವಲ 2ನೇ ಬಾರಿಗೆ ಇಂತಹ ಸಾಧನೆ ಸಾಧ್ಯವಾಗಿದೆ. ಅರ್ಥಾತ್ 36 ವರ್ಷಗಳ ಬಳಿಕ ಹೀಗೊಂದು ಸಾಧನೆ ಆಗಿದೆ. ಇದಕ್ಕೆ ಕಾರಣವೇನು ಗೊತ್ತಾ?
ಮೊರಾಕ್ಕೊ ವಿದೇಶಗಳಲ್ಲಿ ಆಡುತ್ತಿರುವ ತನ್ನದೇ ಮೂಲಬೇರು ಹೊಂದಿರುವ ಆಟಗಾರರನ್ನು ಕಣಕ್ಕಿಳಿಸಿದ್ದು. ಅದಕ್ಕಾಗಿ ಫಿಫಾ ನಿಯಮವನ್ನೇ ಬದಲಿಸುವಂತೆ ಮಾಡಿತು. ಯಾವುದೇ ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರು ತಮ್ಮ ದೇಶವನ್ನು ಬದಲಿಸಿಕೊಳ್ಳಲು, ಕನಿಷ್ಠ ಪಂದ್ಯಗಳೊಳಗೆ ಆಡಿದ್ದರೆ ಮಾತ್ರ ಸಾಧ್ಯ ಎಂದು ನಿಯಮ ಮಾಡುವಂತೆ ಫಿಫಾ ಮೇಲೆ ಮೊರಾಕ್ಕೊ ಒತ್ತಡ ಹೇರಿತು. ಆ ದೇಶದ ದೀರ್ಘಕಾಲದ ಬೇಡಿಕೆಗೆ ಫಿಫಾ ಸ್ಪಂದಿಸಿ ಆಯ್ತು ಎಂದಿತು. ಅದರ ಪರಿಣಾಮವೀಗ ಆಗಿದೆ.
ಮೊರಾಕ್ಕೊದ ಪ್ರಜೆಗಳು ಬಹಳ ಹಿಂದೆಯೇ ಬೇರೆಬೇರೆ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ನೆದರ್ಲೆಂಡ್, ಫ್ರಾನ್ಸ್, ಸ್ಪೇನ್ ಹೀಗೆ ಯಾವುದೋ ದೇಶಗಳಲ್ಲಿ ಹುಟ್ಟಿ, ಅಲ್ಲಿನ ಲೀಗ್‌ಗಳಲ್ಲಿ ಆಡುತ್ತಿರುವ ಮೊರಾಕ್ಕೊ ಮೂಲದ ಆಟಗಾರರು, ಮೊರಾಕ್ಕೊ ಪರ ಕಣಕ್ಕಿಳಿದರು. ಹಕೀಮ್ ಝಿಯೆಚ್, ನೌಸೆರ್ ಮಾಜ್ರಾಯಿ, ಸೋಫಿಯಾನ್ ಅಮ್ರಾಬಾತ್ ಇವರೆಲ್ಲ ನೆದರ್ಲೆಂಡ್‌ನಲ್ಲಿ ಹುಟ್ಟಿದವರು. ಅಶ್ರಫ್ ಹಕಿಮಿ ಸ್ಪೇನ್‌ನಲ್ಲಿ ಹುಟ್ಟಿದವರು, ಗೋಲ್‌ಕೀಪರ್ ಯಾಸಿನ್ ಬೊನೊವು, ನಾಯಕ ರೊಮೇನ್ ಸೈಸ್, ಸೋಫಿಯನ್ ಬೌಫಾಲ್ ಇವರೆಲ್ಲ ವಿದೇಶಿ ಮೂಲದವರೇ! ಇವರೆಲ್ಲ ಮೊರಾಕ್ಕೊಕ್ಕಾಗಿ ಒಂದಾದರು. ಹೆಚ್ಚೇಕೆ ತಂಡದ 26 ಆಟಗಾರರ ಪೈಕಿ 16 ಮಂದಿ ವಿದೇಶೀಯರು! ಇವರೆಲ್ಲ ಒಂದಾಗಿ ಮೊರಾಕ್ಕೊದ ಅದ್ಭುತ ಸಾಧನೆಗೆ ಕಾರಣವಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
