
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್
Team Udayavani, Mar 26, 2023, 5:47 PM IST

ಮುಂಬೈ: ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್ ಮುಂಬರುವ ಐಪಿಎಲ್ 2023 ರಿಂದ ಹೊರಗುಳಿಯಲಿದ್ದಾರೆ. ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಮುಂಬರುವ ಆಶಸ್ ನಿಂದಲೂ ಅವರು ಹೊರಗುಳಿಯಬಹುದು.
26 ವರ್ಷದ ರಿಚರ್ಡ್‌ಸನ್ ಅವರು ಕಳೆದ ವಾರ ಕ್ಲಬ್ ಕ್ರಿಕೆಟ್ ಆಡುವಾಗ ಮತ್ತೆ ಗಾಯಗೊಂಡರು. ಈ ಹಿಂದೆ ಭಾರತ ವಿರುದ್ಧದ ಏಕದಿನ ಸರಣಿಯಿಂದಲೂ ಅವರು ಹೊರಗುಳಿದಿದ್ದರು.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ
ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಿಚರ್ಡ್‌ಸನ್ ಅವರು ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಬೇಕಿತ್ತು. ಆಸ್ಟ್ರೇಲಿಯ ವೇಗದ ಬೌಲರ್ ಈ ಹಿಂದೆ 2019 ರಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಇದರಿಂದಾಗಿ ಅವರು ಆ ವರ್ಷ ಏಕದಿನ ವಿಶ್ವಕಪ್ ಮತ್ತು ಆ್ಯಶಸ್ ಸರಣಿಯನ್ನು ಕಳೆದು ಕೊಳ್ಳಬೇಕಾಯಿತು.
ಈಗಾಗಲೇ ಜಸ್ಪ್ರೀತ್ ಬುಮ್ರಾ ಅವರ ಸೇವೆಯನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಗೆ ಇದು ಮತ್ತಷ್ಟು ಶಾಕ್ ನೀಡಿದೆ.
ಟಾಪ್ ನ್ಯೂಸ್
