ಮುಂಬೈ-ರಾಜಸ್ಥಾನ್‌ ಮುಖಾಮುಖೀಜೈಪುರದಲ್ಲಿ ಜಯ ಯಾರಿಗೆ?

Team Udayavani, Apr 22, 2018, 12:31 PM IST

Ajinkya-Madhukar-Rahane–1.jpg

ಜೈಪುರ: ಮುಂಬೈ ಇಂಡಿಯನ್ಸ್‌ ತಂಡ ಗೆಲುವಿನ ಖಾತೆ ತೆರೆದಿದೆ. ಇನ್ನೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ತವರಿನಂಗಳದಲ್ಲಿ ಸೋಲನ್ನೂ ಅನುಭವಿಸಿದೆ. ಹೀಗಾಗಿ ರವಿವಾರ ಇಲ್ಲಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಗೆಲ್ಲುವ ತಂಡ ಯಾವುದೆಂಬುದು ಕ್ರಿಕೆಟ್‌ ಅಭಿಮಾನಿಗಳ ಮುಂದಿರುವ ದೊಡ್ಡ ಪ್ರಶ್ನೆ.

ದಿನದ ಇನ್ನೊಂದು ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಪರಸ್ಪರ ಎದುರಾಗಲಿವೆ. ಇದು ಸನ್‌ರೈಸರ್ ಪಾಲಿನ ತವರಿನ ಪಂದ್ಯವಾಗಿದೆ.

ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಸೋಲಿನ ಬಳಿಕ ಮಂಗಳವಾರ ಬೆಂಗಳೂರಿನಲ್ಲೇ ಆರ್‌ಸಿಬಿಗೆ ಆಘಾತವಿಕ್ಕಿ ಪ್ರಸಕ್ತ ಋತುವಿನ ಮೊದಲ ವಿಜಯೋತ್ಸವ ಆಚರಿಸಿದೆ. ನಾಯಕ ರೋಹಿತ್‌ ಶರ್ಮ ಕೂಡ ಬ್ಯಾಟಿಂಗ್‌ ಫಾರ್ಮ್ ಕಂಡುಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ 94 ರನ್‌ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ರೋಹಿತ್‌ ಹೆಚ್ಚುಗಾರಿಕೆ. ಒಮ್ಮೆ ಗೆಲುವಿನ ಹಾದಿ ಹಿಡಿದ ಬಳಿಕ ಮುಂಬೈಯನ್ನು ತಡೆಯುವುದು ಕಷ್ಟ ಎಂಬುದೊಂದು ವಾಡಿಕೆ.

ವೆಸ್ಟ್‌ ಇಂಡೀಸಿನ ಎವಿನ್‌ ಲೆವಿಸ್‌ ಕೂಡ 65 ರನ್‌ ಸಿಡಿಸಿ ಎದುರಾಳಿಗಳ ಮೇಲೆ ಅಪಾಯದ ಬಾವುಟ ಹಾರಿಸಿದ್ದಾರೆ. ಪಾಂಡ್ಯ ಬ್ರದರ್ ಓಕೆ. ಕೀಪರ್‌ ಇಶಾನ್‌ ಕಿಶನ್‌ ಸಖತ್‌ ಪ್ರದರ್ಶನ ನೀಡಿದ್ದಾರೆ. ಆದರೆ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಕಣ್ಣಿಗೆ ಏಟು ಬಿದ್ದಿರುವುದರಿಂದ ಇಶಾನ್‌ ರವಿವಾರ ಕಣಕ್ಕಿಳಿಯುವುದು ಖಚಿತಪಟ್ಟಿಲ್ಲ. ಕೆರಿಬಿಯನ್‌ನ ಹಾರ್ಡ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ಇನ್ನೂ ಸಿಡಿಯಲಾರಂಭಿಸಿಲ್ಲ ಎಂಬುದಷ್ಟೇ ಮುಂಬೈ ಬ್ಯಾಟಿಂಗ್‌ ಸರದಿಯ ಸದ್ಯದ ಸಮಸ್ಯೆ.ಜಸಪ್ರೀತ್‌ ಬುಮ್ರಾ, ಮಿಚೆಲ್‌ ಮೆಕ್ಲೆನಗನ್‌, ಮುಸ್ತಫಿಜುರ್‌ ರೆಹಮಾನ್‌, ಮಾಯಾಂಕ್‌ ಮಾರ್ಕಂಡೆ, ಪಾಂಡ್ಯಾಸ್‌ ಅವರನ್ನೊಳಗೊಂಡ ಮುಂಬೈ ಬೌಲಿಂಗ್‌ ವಿಭಾಗ ಕೂಡ ಘಾತಕವಾಗಿದೆ.

ಜೋಶ್‌ ತೋರದ ರಾಜಸ್ಥಾನ್‌
ಐದರಲ್ಲಿ 2 ಪಂದ್ಯ ಗೆದ್ದು ಸಾಮಾನ್ಯ ಮಟ್ಟದ ಪ್ರದರ್ಶನ ನೀಡಿರುವ ರಾಜಸ್ಥಾನ್‌ ರಾಯಲ್ಸ್‌ ಇನ್ನೂ ಅಪಾಯಕಾರಿಯಾಗಿ ಗೋಚರಿಸಿಲ್ಲ. ಚೆನ್ನೈ ವಿರುದ್ಧ ಶುಕ್ರವಾರ ಅನುಭವಿಸಿದ ಭಾರೀ ಅಂತರದ ಸೋಲು ಅಜಿಂಕ್ಯ ರಹಾನೆ ಪಡೆಗೆ ಸಹಜವಾಗಿಯೇ ಅಂಜಿಕೆ ಮೂಡಿಸಿದೆ.

ರಾಜಸ್ಥಾನ್‌ ಓಪನಿಂಗ್‌ ಈವರೆಗೆ ಸಂಪೂರ್ಣ ಕೈಕೊಟ್ಟಿದೆ. ಸಂಜು ಸ್ಯಾಮ್ಸನ್‌ ಒಂದು ಪಂದ್ಯದಲ್ಲಿ 94 ರನ್‌ ಬಾರಿಸಿದ ಬಳಿಕ ಮತ್ತೆ ಸಿಡಿಯಲು ಮರೆತಿದ್ದಾರೆ. ದಾಖಲೆ ಬೆಲೆಗೆ ಮಾರಾಟಗೊಂಡ ಎಡಗೈ ಬೌಲರ್‌ ಜೈದೇವ್‌ ಉನಾದ್ಕತ್‌ ಅವರದು ದೊಡ್ಡ ವೈಫ‌ಲ್ಯ. ಮೆಂಟರ್‌ ಶೇನ್‌ ವಾರ್ನ್ ತುರ್ತು ಕೆಲಸದ ನಿಮಿತ್ತ ಆಸ್ಟ್ರೇಲಿಯಕ್ಕೆ ತೆರಳಿದ್ದು ಕೂಡ ರಾಜಸ್ಥಾನ್‌ಗೆ ಎದುರಾದ ದೊಡ್ಡ ಹಿನ್ನಡೆಯೆಂದೇ ಹೇಳಬೇಕು.

Ad

ಟಾಪ್ ನ್ಯೂಸ್

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

Rohit Sharma may lose ODI captaincy

Team India: ರೋಹಿತ್ ಶರ್ಮಾ ಕೈ ತಪ್ಪುತ್ತಾ ಏಕದಿನ ನಾಯಕತ್ವ? ಏನಿದು ಹೊಸ ಬೆಳವಣಿಗೆ

England v India: ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡಿಗೆ ರೂಟ್‌ ಆಸರೆ

England v India: ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡಿಗೆ ರೂಟ್‌ ಆಸರೆ

FIFA Rankings: 133ಕ್ಕೆ ಭಾರತ ಕುಸಿತ,9 ವರ್ಷಗಳಲ್ಲೇ ಕನಿಷ್ಠ

FIFA Rankings: 133ಕ್ಕೆ ಭಾರತ ಕುಸಿತ,9 ವರ್ಷಗಳಲ್ಲೇ ಕನಿಷ್ಠ

ಐದು ಎಸೆತಗಳಲ್ಲಿ 5 ವಿಕೆಟ್‌: ಐರ್ಲೆಂಡಿನ ಕರ್ಟಿಸ್‌ ಕ್ಯಾಂಪರ್‌ ದಾಖಲೆ

ಐದು ಎಸೆತಗಳಲ್ಲಿ 5 ವಿಕೆಟ್‌: ಐರ್ಲೆಂಡಿನ ಕರ್ಟಿಸ್‌ ಕ್ಯಾಂಪರ್‌ ದಾಖಲೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.