ಎಬಿಡಿಯ ನೆಚ್ಚಿನ ಟಿ20 ಕ್ರಿಕೆಟಿಗ ಯಾರು?
Team Udayavani, Mar 7, 2023, 8:05 AM IST
ಮುಂಬಯಿ: “360 ಡಿಗ್ರಿ’ ಬ್ಯಾಟರ್, ಆರ್ಸಿಬಿಯ ಮಾಜಿ ಬಿಗ್ ಹಿಟ್ಟರ್ ಎಬಿ ಡಿ ವಿಲಿಯರ್ ತಮ್ಮ ನೆಚ್ಚಿನ ಟಿ20 ಕ್ರಿಕೆಟಿಗನನ್ನು ಹೆಸರಿಸಿದ್ದಾರೆ.
ಆದರೆ ಇದು ಆರ್ಸಿಬಿಯಲ್ಲಿ ಅವರ ಜತೆಗಾರರಾಗಿದ್ದ ಕ್ರಿಸ್ ಗೇಲ್ ಅಥವಾ ವಿರಾಟ್ ಕೊಹ್ಲಿ ಅಲ್ಲ. ಹಾಗಾದರೆ ಮತ್ತೆ ಯಾರು?
“ಸೂಪರ್ ನ್ಪೋರ್ಟ್’ ಜತೆ ಮಾತಾಡುತ್ತಿದ್ದ ಎಬಿಡಿ, ಪರಿಪೂರ್ಣ ಆಲ್ರೌಂಡರ್ ರಶೀದ್ ಖಾನ್ ಅವರೇ ತನ್ನ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಎಂಬುದಾಗಿ ಹೇಳಿದ್ದಾರೆ.
“ರಶೀದ್ ಖಾನ್ ಕೇವಲ ಲೆಗ್ಸ್ಪಿನ್ ಬೌಲಿಂಗ್ ಮೂಲಕವಷ್ಟೇ ಅಲ್ಲ, ಪರಿಣಾಮಕಾರಿ ಬ್ಯಾಟಿಂಗ್ ಮೂಲಕವೂ ತಂಡದ ನೆರವಿಗೆ ನಿಲ್ಲಬಲ್ಲರು. ಅಷ್ಟೇ ಅಲ್ಲ, ಅವರು ಅತ್ಯುತ್ತಮ ಫೀಲ್ಡರ್ ಕೂಡ ಹೌದು. ಕ್ರಿಕೆಟಿನ ಈ ಮೂರೂ ವಿಭಾಗಗಳಲ್ಲಿ ರಶೀದ್ ವಿಶೇಷ ನೈಪುಣ್ಯ ಸಾಧಿಸಿದ್ದಾರೆ. ಅವರು ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರಲ್ಲ, ಅತ್ಯುತ್ತಮ ಆಟಗಾರನೇ ಆಗಿದ್ದಾರೆ’ ಎಂಬುದಾಗಿ ಎಬಿಡಿ ಅಫ್ಘಾನ್ ಆಟಗಾರನನ್ನು ಪ್ರಶಂಸಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು