
ಜಡೇಜಾ- ಅಶ್ವಿನ್ ಸ್ಪಿನ್ ಜಾಲ: ನಾಗ್ಪುರದಲ್ಲಿ ನಲುಗಿದ ಆಸ್ಟ್ರೇಲಿಯಾ
Team Udayavani, Feb 9, 2023, 2:53 PM IST

ನಾಗ್ಪುರ: ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದ ಮೊದಲ ದಿನವೇ ಭಾರತೀಯ ಬೌಲರ್ ಗಳು ಆಸ್ಟ್ರೇಲಿಯಾ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದ್ದಾರೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ ಜಾಲಕ್ಕೆ ಸಿಕ್ಕಿಬಿದ್ದ ಕಾಂಗರೂಗಳು ನಾಗ್ಪುರ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 177 ರನ್ ಗೆ ಆಲೌಟಾಗಿದ್ದಾರೆ.
ಆಸೀಸ್ ಪರ 49 ರನ್ ಗಳಿಸಿದ ಮಾರ್ನಸ್ ಲಬುಶೇನ್ ಅವರದ್ದೇ ಹೆಚ್ಚಿನ ಗಳಿಕೆ. ಉಳಿದಂತೆ ಸ್ಮಿತ್ 37, ಅಲೆಕ್ಸ್ ಕ್ಯಾರಿ 36 ಮತ್ತು ಹ್ಯಾಂಡ್ಸ್ ಕಾಂಬ್ ಅವರು 31 ರನ್ ಮಾಡಿದರು.
ಕೆಲವು ತಿಂಗಳ ಬಳಿಕ ಕ್ರಿಕೆಟ್ ಪದಾರ್ಪಣೆ ಮಾಡಿದ ಜಡೇಜಾ ಮೊದಲ ಪಂದ್ಯದಲ್ಲೇ ಮಿಂಚಿದರು. ಆಸೀಸ್ ಆಟಗಾರರಿಗೆ ಕಾಡಿದ ಜಡೇಜಾ 47 ರನ್ ನೀಡಿ ಐದು ವಿಕೆಟ್ ಕಿತ್ತರು. ಅಶ್ವಿನ್ ಮೂರು ವಿಕೆಟ್ ಪಡೆದರೆ, ಶಮಿ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಕಿತ್ತರು.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅಲ್ಲದೆ ಅತೀ ವೇಗವಾಗಿ (89 ಪಂದ್ಯ) ಈ ಸಾಧನೆ ಮಾಡಿದ ಭಾರತೀಯ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್: ದಾಖಲೆ ಬರೆದ ರವಿಚಂದ್ರನ್ ಅಶ್ವಿನ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?