
ಅಚಂತ ಕಮಲ್‌ಗೆ ಖೇಲ್‌ರತ್ನ ಅಶ್ವಿನಿ ಅಕ್ಕುಂಜೆಗೆ ಧ್ಯಾನ್‌ಚಂದ್
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆ
Team Udayavani, Nov 15, 2022, 6:55 AM IST

ಹೊಸದಿಲ್ಲಿ: ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸೋಮವಾರ 2022ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಯಾದಿಯನ್ನು ಪ್ರಕಟಿಸಿದೆ. ಹಿರಿಯ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಅವರಿಗೆ ಪ್ರತಿಷ್ಠಿತ “ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ’ ಪ್ರಶಸ್ತಿ ಒಲಿದಿದೆ.
ಉಡುಪಿ ಜಿಲ್ಲೆಯ ಖ್ಯಾತ ಓಟಗಾರ್ತಿ ಅಶ್ವಿನಿ ಅಕ್ಕುಂಜೆ ಅವರನ್ನು ಜೀವಮಾನದ ಸಾಧನೆಗಾಗಿ “ಧ್ಯಾನ್‌ಚಂದ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಕಬಡ್ಡಿ ಆಟಗಾರ ಹಾಗೂ ಕೋಚ್ ಬಿ.ಸಿ. ಸುರೇಶ್ ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಒಟ್ಟು 25 ಮಂದಿ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, 7 ಮಂದಿ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ನಾಲ್ವರಿಗೆ ಜೀವಮಾನ ಸಾಧನೆಯ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ನ. 30ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಮೇಜರ್ ಧ್ಯಾನ್ ಚಂದ್ ಖೇಲ್‌ರತ್ನಅಚಂತ ಶರತ್ ಕಮಲ್ (ಟಿಟಿ) ಅರ್ಜುನ ಪ್ರಶಸ್ತಿ ದೀಪ್ ಗ್ರೇಸ್ ಎಕ್ಕಾ (ಹಾಕಿ), ಸೀಮಾ ಪುನಿಯ (ಆ್ಯತ್ಲೆಟಿಕ್ಸ್), ಎಲ್ಡೋಸ್ ಪೌಲ್ (ಆ್ಯತ್ಲೆಟಿಕ್ಸ್), ಅವಿನಾಶ್ ಮುಕುಂದ್ ಸಬ್ಲೆ (ಆ್ಯತ್ಲೆಟಿಕ್ಸ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಎಚ್.ಎಸ್. ಪ್ರಣಯ್ (ಬ್ಯಾಡ್ಮಿಂಟನ್), ಶ್ರೀ ಅಮಿತ್ (ಬಾಕ್ಸಿಂಗ್), ನಿಖತ್ ಜರೀನ್ (ಬಾಕ್ಸಿಂಗ್), ಭಕ್ತಿ ಪ್ರದೀಪ್ ಕುಲಕರ್ಣಿ (ಚೆಸ್), ಆರ್. ಪ್ರಜ್ಞಾನಂದ (ಚೆಸ್), ಸುಶೀಲಾ ದೇವಿ (ಜೂಡೊ), ಸಾಕ್ಷಿ ಕುಮಾರಿ (ಕಬಡ್ಡಿ), ನಯನ್ ಮೋನಿ ಸೈಕಿಯಾ (ಲಾನ್ ಬೌಲ್), ಸಾಗರ್ ಕೈಲಾಸ್ ಓವಲ್ಕರ್ (ಮಲ್ಲಕಂಭ), ಇಳವನಿಲ್ ವಳರಿವನ್ (ಶೂಟಿಂಗ್), ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್), ಶ್ರೀಜಾ ಅಕುಲ್ (ಟಿಟಿ), ವಿಕಾಸ್ ಠಾಕೂರ್ (ವೇಟ್‌ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಶ್ರೀ ಪ್ರವೀಣ್ (ವುಶು), ಮಾನಸಿ ಗಿರೀಶ್ಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್), ತರುಣ್ ಧಿಲ್ಲಾನ್ (ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ ಸ್ವಿಮ್ಮಿಂಗ್), ಜೆರ್ಲಿನ್ ಅನಿಕಾ ಜೆ. (ಡೀಫ್ ಬ್ಯಾಡ್ಮಿಂಟನ್).
ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ)
ಜೀವನ್‌ಜೋತ್ ಸಿಂಗ್ ತೇಜ (ಆರ್ಚರಿ), ಮೊಹಮ್ಮದ್ ಅಲಿ ಖಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ್ ಶಿರೂರ್ (ಪ್ಯಾರಾ ಶೂಟಿಂಗ್), ಸುಜಿತ್ ಮಾನ್ (ಕುಸ್ತಿ).
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ)
ದಿನೇಶ್ ಜವಾಹರ್ ಲಾಡ್ (ಕ್ರಿಕೆಟ್), ಬಿಮಲ್ ಪ್ರಫುಲ್ಲ ಘೋಷ್ (ಫುಟ್‌ಬಾಲ್), ರಾಜ್ ಸಿಂಗ್ (ಕುಸ್ತಿ).
ಧ್ಯಾನ್ ಚಂದ್ ಪ್ರಶಸ್ತಿ (ಜೀವಮಾನ ಸಾಧನೆ)
ಅಶ್ವಿನಿ ಅಕ್ಕುಂಜೆ (ಆ್ಯತ್ಲೆಟಿಕ್ಸ್), ಧರ್ಮವೀರ್ ಸಿಂಗ್ (ಹಾಕಿ), ಬಿ.ಸಿ. ಸುರೇಶ್ (ಕಬಡ್ಡಿ), ನಿರ್ ಬಹಾದೂರ್ ಗುರುಂಗ್ (ಪ್ಯಾರಾ ಆ್ಯತ್ಲೆಟಿಕ್ಸ್).
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಂದ್ಯಕ್ಕೆ ಮಳೆ ಅಡ್ಡಿ : ಕೆಕೆಆರ್ ವಿರುದ್ಧ 7 ರನ್‌ಗಳಿಂದ ಗೆದ್ದ ಪಂಜಾಬ್ ಕಿಂಗ್ಸ್

200ನೇ ಸಿಕ್ಸರ್ ಬಾರಿಸಿದ ಧೋನಿ: ಈ ಸಾಧನೆ ಮಾಡಿದ ಮೊದಲ ಸಿಎಸ್ ಕೆ ಆಟಗಾರ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ

ಮೊದಲ ಪಂದ್ಯದಲ್ಲೇ ಗಾಯ: ಕೂಟದಿಂದಲೇ ಹೊರಬಿದ್ದರೆ ಕೇನ್ ವಿಲಿಯಮ್ಸನ್?

ಧೋನಿ ಕಾಲುಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ರಶ್ಮಿಕಾ ಮಾಡಿದ್ದೇನು?