ಹೆಲಿಕಾಪ್ಟರ್ ಪತನ; ಬಾಸ್ಕೆಟ್ ಬಾಲ್ ದಂತಕಥೆ ಕೋಬೆ ಬ್ರಯಾಂಟ್, ಪುತ್ರಿ ಸಾವು

ಲಾಸ್ ಏಂಜಲೀಸ್ ನಿಂದ ಸುಮಾರು 30 ಮೈಲಿ ದೂರದ ಕಲಾಬಾಸಾಸ್ ಸಮೀಪದ ಹೆಲಿಕಾಪ್ಟರ್ ಪತನ

Team Udayavani, Jan 27, 2020, 10:10 AM IST

ವಾಷಿಂಗ್ಟನ್: ಅಮೆರಿಕದ ಬಾಸ್ಕೆಟ್ ಬಾಲ್ ದಂತಕಥೆ ಆಟಗಾರ ಕೋಬೆ ಬ್ರಯಾಂಟ್ ಹಾಗೂ ಅವರ 13 ವರ್ಷದ ಪುತ್ರಿ ಗಿಯಾನ್ನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ದುರಂತ ಘಟನೆ ಭಾನುವಾರ ನಡೆದಿದೆ ಎಂದು ದ ಗಾರ್ಡಿಯನ್ ವರದಿ ತಿಳಿಸಿದೆ.

ಲಾಸ್ ಏಂಜಲೀಸ್ ನಿಂದ ಸುಮಾರು 30 ಮೈಲಿ ದೂರದ ಕಲಾಬಾಸಾಸ್ ಸಮೀಪದ ಹೆಲಿಕಾಪ್ಟರ್ ಪತನವಾಗಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನಲ್ಲಿ ಕೋಬೆ, ಮಗಳು ಗಿಯಾನ್ನಾ ಹಾಗೂ ಇತರ ಎಂಟು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿ ಹೇಳಿದೆ.

ರಕ್ಷಣಾ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿರುವುದಾಗಿ ವರದಿ ತಿಳಿಸಿದೆ. ಎಸ್.76 ಹೆಲಿಕಾಪ್ಟರ್ ದುರಂತ ಯಾವ ಕಾರಣದಿಂದ ಸಂಭವಿಸಿದೆ ಎಂದು ತಿಳಿದು ಬಂದಿಲ್ಲ ಎಂಬುದಾಗಿ ಎಫ್ ಎಎ ಪ್ರಕಟಣೆಯಲ್ಲಿ ತಿಳಿಸಿದೆ. ಹೆಲಿಕಾಪ್ಟರ್ ಪತನ ಘಟನೆ ಬಗ್ಗೆ ತನಿಖೆಯ ನಂತರ ಕಾರಣ ಪತ್ತೆ ಹಚ್ಚಲಾಗುವುದು ಎಂದು ವಿವರಿಸಿದೆ. ಆದರೆ ಹೆಲಿಕಾಪ್ಟರ್ ನಲ್ಲಿ ಯಾರೆಲ್ಲ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಬಹಿರಂಗೊಳಿಸಿಲ್ಲ ಎಂದು ವರದಿ ತಿಳಿಸಿದೆ.

41 ವರ್ಷದ ಕೋಬೆ ಬ್ರಯಾಂಟ್ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಐದು ಬಾರಿ ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಚಾಂಪಿಯನ್ ಶಿಪ್ ಪಡೆದ ಕೀರ್ತಿಗೆ ಭಾಜನರಾಗಿದ್ದರು. 2018ರಲ್ಲಿ ಬ್ರಯಾಂಟ್ ನಿವೃತ್ತಿ ಘೋಷಿಸಿದ್ದರು. ಬಾಸ್ಕೆಟ್ ಬಾಲ್ ದಿಗ್ಗಜ ಕೋಬೆ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೊಂದು ಆಘಾತಕಾರಿ ಸುದ್ದಿ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ