ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!
Team Udayavani, Jan 26, 2022, 4:37 PM IST
ದೋಹಾ: ವಿಶ್ವ ಕ್ರಿಕೆಟ್ ನಲ್ಲಿ ಮತ್ತೋರ್ವ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಸುದ್ದಿಯಾಗುತ್ತಿದ್ದಾರೆ. ನೆದರ್ಲ್ಯಾಂಡ್ ತಂಡದ ಬೌಲರ್ ವಿವಿಯನ್ ಕಿಂಗ್ಮಾ ಅವರು ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಸಿಕ್ಕಿಬಿದ್ದಿದ್ದು, ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.
ದೋಹಾದಲ್ಲಿ ಮಂಗಳವಾರ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯ ಮೂರನೇ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ 3 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ನೆದರ್ಲೆಂಡ್ಸ್ ವೇಗದ ಬೌಲರ್ ವಿವಿಯನ್ ಕಿಂಗ್ಮಾ ಅವರನ್ನು ನಾಲ್ಕು ಏಕದಿನ/ಟಿ20 ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.
“ಇದರ ಹೊರತಾಗಿ ಕಿಂಗ್ಮಾ ಅವರ ಅಶಿಸ್ತಿನ ದಾಖಲೆಗೆ ಐದು ಡಿಮೆರಿಟ್ ಅಂಕಗಳನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಇದು ಮೊದಲ ಅಪರಾಧವಾಗಿದೆ” ಎಂದು ಅಧಿಕೃತ ಐಸಿಸಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?
ಅಫ್ಘಾನಿಸ್ತಾನದ ಇನಿಂಗ್ಸ್ ನ 31 ನೇ ಓವರ್‌ನಲ್ಲಿ ವೇಗದ ಬೌಲರ್ ಕಿಂಗ್ಮಾ ತನ್ನ ಉಗುರುಗಳಿಂದ ಸ್ಕ್ರಾಚ್ ಮಾಡುವ ಮೂಲಕ ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದ್ದರು.
ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಅವರು ಬಾಲ್ ಟ್ಯಾಂಪರ್ ಮಾಡಿ ಸಿಕ್ಕಿಬಿದ್ದಿದ್ದರು. ಬಳಿಕ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ
ಥಾಮಸ್ ಕಪ್ ಬ್ಯಾಡ್ಮಿಂಟನ್ ಇತಿಹಾಸ : ಪ್ರಧಾನಿ ಶ್ಲಾಘನೆ ; 1 ಕೋಟಿ ರೂ. ಬಹುಮಾನ
ಐಪಿಎಲ್ ನಲ್ಲಿ ಸೈಮಂಡ್ಸ್ ಗೌರವಾರ್ಥವಾಗಿ ಕಪ್ಪು ತೋಳುಪಟ್ಟಿಗಳನ್ನು ಧರಿಸಿ ಆಟ
ಗುಜರಾತ್ ಟೈಟಾನ್ಸ್ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್ ಬುಮ್ರಾ” ಮಹೇಶ್ಕುಮಾರ್