ಸೂಪರ್ 12 ಪಂದ್ಯ: ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ಕಂಡ ನೆದರ್ಲೆಂಡ್ಸ್
Team Udayavani, Nov 2, 2022, 3:11 PM IST
ಅಡಿಲೇಡ್ : ಇಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯಾವಳಿಯ ಸೂಪರ್ 12 ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಜಿಂಬಾಬ್ವೆ ವಿರುದ್ದ 5 ವಿಕೆಟ್ ಗೆಲುವು ಸಾಧಿಸಿದೆ.
ನೆದರ್ಲೆಂಡ್ಸ್ 118 ರನ್ಗಳ ಸಣ್ಣ ಗುರಿಯನ್ನು ಎರಡು ಓವರ್ಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಒ’ಡೌಡ್ 47 ಎಸೆತಗಳಲ್ಲಿ 52 ರನ್ ಗಳಿಸಿದರು. ತಮ್ಮ ಮೊದಲ ಗೆಲುವನ್ನು ಕಂಡ ನೆದರ್ಲೆಂಡ್ಸ್ 5 ವಿಕೆಟ್ಗೆ 120 ರನ್ ಗಳಿಸಿತು. ನೆದರ್ಲೆಂಡ್ಸ್ ಮತ್ತು ಜಿಂಬಾಬ್ವೆ ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡ ನಂತರ ಪಾಲ್ ವ್ಯಾನ್ ಮೀಕೆರೆನ್ ಡಚ್ ತಂಡದ ಶಿಸ್ತಿನ ವೇಗದ ಬೌಲಿಂಗ್ ಪ್ರದರ್ಶನವನ್ನು ಮುನ್ನಡೆಸಿದರು. ಬ್ರ್ಯಾಂಡನ್ ಗ್ಲೋವರ್, ಲೋಗನ್ ವ್ಯಾನ್ ಬೀಕ್ ಮತ್ತು ಬಾಸ್ ಡಿ ಲೀಡೆ ಕೂಡ ತಲಾ ಎರಡು ವಿಕೆಟ್ಗಳೊಂದಿಗೆ ಜಿಂಬಾಬ್ವೆ ತಂಡವನ್ನು 19.2 ಓವರ್ಗಳಲ್ಲಿ 117 ಕ್ಕೆ ಆಲೌಟ್ ಮಾಡಿದರು. ಗೆಲ್ಲಲೇಬೇಕಾದ ಪಂದ್ಯದಲ್ಲಿ, ಸಿಕಂದರ್ ರಝಾ ಅವರು ಜಿಂಬಾಬ್ವೆ 100 ರನ್ ದಾಟಲು ನೆರವಾದರು.
ಭಾನುವಾರ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಮೊದಲು ಪಾಕಿಸ್ಥಾನ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಜಿಂಬಾಬ್ವೆ, ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಟೂರ್ನಿಯ ನೆಚ್ಚಿನ ಭಾರತವನ್ನು ಎದುರಿಸಲಿದೆ.