
ಐದು ವರ್ಷದ ಬಳಿಕ ಕೇಂದ್ರ ಗುತ್ತಿಗೆ ಪಡೆದ ನ್ಯೂಜಿಲ್ಯಾಂಡ್ ಬೌಲರ್ ಆ್ಯಡಂ ಮಿಲ್ನೆ
Team Udayavani, Jun 8, 2023, 5:33 PM IST

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್ ಆ್ಯಡಂ ಮಿಲ್ನೆ ಅವರು ಐದು ವರ್ಷಗಳ ಬಳಿಕ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ.
31 ವರ್ಷದ ವೇಗದ ಬೌಲರ್ ಮಿಲ್ನೆ ಕಳೆದ ಋತುವಿನಲ್ಲಿ ರಾಷ್ಟ್ರೀಯ ತಂಡಕ್ಕಾಗಿ 16 ಸೀಮಿತ ಓವರ್ ಆಟಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಆ್ಯಡಂ ಕಳೆದ ವರ್ಷಗಳಲ್ಲಿ ಕಠಿಣ ಪರಿಶ್ರಮ ಮಾಡಿದ್ದಾರೆ. ಅವರು ಈ ಕಾಂಟ್ರಾಕ್ಟ್ ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯೂಜಿಲ್ಯಾಂಡ್ ತಂಡದ ಕೋಚ್ ಗ್ಯಾರಿ ಸ್ಟೆಡಿ ಹೇಳಿದ್ದಾರೆ.
2023-24 ಸೀಸನ್ ಗಾಗಿ 20 ಮಂದಿ ಆಟಗಾರರು ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. ಲೆಫ್ಟ್ ಆರ್ಮ್ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಕೈಬಿಡಲಾಗಿದೆ.
ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಮತ್ತು ಮಾರ್ಟಿನ್ ಗಪ್ಟಿಲ್ ಕೂಡಾ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಇವರೆಲ್ಲರೂ ಈ ಹಿಂದೆ ಪ್ರಪಂಚದಾದ್ಯಂತ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಹೆಚ್ಚು ನಿಯಮಿತವಾಗಿ ಕಾಣಿಸಿಕೊಳ್ಳಲು ನ್ಯೂಜಿಲ್ಯಾಂಡ್ ಒಪ್ಪಂದಗಳಿಂದ ಬಿಡುಗಡೆ ಮಾಡಲು ವಿನಂತಿಸಿದ್ದರು.
ನ್ಯೂಜಿಲ್ಯಾಂಡ್ ಸೆಂಟ್ರಲ್ ಕಾಂಟ್ರ್ಯಾಕ್ಟ್ ಆಟಗಾರರು: ಫಿನ್ ಅಲೆನ್, ಟಾಮ್ ಬ್ಲಂಡೆಲ್, ಮೈಕೆಲ್ ಬ್ರೇಸ್ ವೆಲ್, ಮಾರ್ಕ್ ಚಾಪ್ ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್, ನೀಲ್ ವ್ಯಾಗ್ನರ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ