
ಮೊದಲ ಟಿ 20 ಪಂದ್ಯ; ನ್ಯೂಜಿಲೆಂಡ್ ಎದುರು ಟೀಮ್ ಇಂಡಿಯಾಕ್ಕೆ ಸೋಲು
Team Udayavani, Jan 27, 2023, 10:41 PM IST

ರಾಂಚಿ : ಇಲ್ಲಿ ಶುಕ್ರವಾರ ನಡೆದ ಪ್ರವಾಸಿ ನ್ಯೂಜಿಲೆಂಡ್ ಎದುರಿನ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ.
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ಫಿನ್ ಅಲೆನ್ 35, ಕಾನ್ವೇ ಅವರ ಆಕರ್ಷಕ 52 ರನ್ ಗ್ಲೆನ್ ಫಿಲಿಪ್ಸ್ 17 ರನ್ ಮತ್ತುಅಬ್ಬರಿಸಿದ ಡೆರಿಲ್ ಮಿಚೆಲ್ (ಔಟಾಗದೆ) 59 ಅವರ ಬ್ಯಾಟಿಂಗ್ ಬಲದಿಂದ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಭಾರತ 9 ವಿಕೆಟ್ ಗಳಿಗೆ 155 ರನ್ ಮಾತ್ರ ಗಳಿಸಿ ಸೋಲನ್ನೊಪ್ಪಿತು.15 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಇಶಾನ್ ಕಿಶನ್,ರಾಹುಲ್ ತ್ರಿಪಾಠಿ ಮತ್ತು ಗಿಲ್ ಬೇಗನೆ ಪೆವಿಲಿಯನ್ ಗೆ ಮರಳಿದರು.
ಸೂರ್ಯಕುಮಾರ್ ಯಾದವ್ 47 ರನ್, ಹಾರ್ದಿಕ್ ಪಾಂಡ್ಯ 21 ಮತ್ತು ವಾಷಿಂಗ್ಟನ್ ಸುಂದರ್ 50 ರನ್ ಗಳಿಸಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. 21 ರನ್‌ಗಳ ಜಯ ನ್ಯೂಜಿಲೆಂಡ್ ಗೆ ಒಲಿಯಿತು.
ಮೈಕೆಲ್ ಬ್ರೇಸ್ವೆಲ್, ನಾಯಕ ಮಿಚೆಲ್ ಸ್ಯಾಂಟ್ನರ್ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್