ವಿಶ್ವಕಪ್ ಫುಟ್ ಬಾಲ್ ಕ್ಷಣಗಣನೆ: ಬ್ರಝಿಲ್ ತಂಡ ಸೇರಿಕೊಂಡ ನೇಯ್ಮರ್
Team Udayavani, Nov 16, 2022, 11:17 PM IST
ಟುರಿನ್ (ಇಟಲಿ): ಕತಾರ್ ಆತಿಥ್ಯದಲ್ಲಿ ಸಾಗಲಿರುವ ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ ಇನ್ನು ಮೂರೇ ದಿನಗಳು ಬಾಕಿ. ಕಾಲ್ಚೆಂಡಿನ ಕಾದಾಟಕ್ಕೆ 32 ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಈ ಹಂತದಲ್ಲಿ ನೆಚ್ಚಿನ ಬ್ರಝಿಲ್ ತಂಡದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಸ್ಟಾರ್ ಆಟಗಾರ ನೇಯ್ಮರ್ ಬುಧವಾರ ತಂಡವನ್ನು ಕೂಡಿಕೊಂಡರು.
ಪ್ಯಾರಿಸ್ ಸೇಂಟ್ ಜರ್ಮನ್ ಪರ ಆಡುತ್ತಿದ್ದ ನೇಯ್ಮರ್ ವಿಮಾನ ಸಮಸ್ಯೆ ಯಿಂದಾಗಿ ಫ್ರಾನ್ಸ್‌ನಲ್ಲೇ ಉಳಿದು ಕೊಂಡಿದ್ದರು. ಇದೀಗ ಇಟಲಿಗೆ ಆಗಮಿಸಿ ಟುರಿನ್‌ನಲ್ಲಿರುವ ತಂಡ ವನ್ನು ಕೂಡಿಕೊಂಡಿದ್ದಾರೆ.
ಶನಿವಾರದ ತನಕ ಬ್ರಝಿಲ್ ತಂಡ ಇಲ್ಲೇ ಉಳಿಯಲಿದೆ. ಬಳಿಕ ಕತಾರ್ ತಲುಪಲಿದೆ. 5 ಬಾರಿಯ ಚಾಂಪಿ ಯನ್ ತಂಡ ವಾಗಿ ರುವ ಬ್ರಝಿಲ್ ಕಳೆ ದೆರಡು ದಶಕಗಳಿಂದ ಪ್ರಶಸ್ತಿಯ ಬರಗಾಲದಲ್ಲಿದೆ. 2002ರ ಬಳಿಕ ಕಪ್ ಎತ್ತಲು ವಿಫಲ ವಾಗುತ್ತಲೇ ಬಂದಿದೆ. ನ. 24ರಂದು ಸರ್ಬಿಯಾವನ್ನು ಎದುರಿ ಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಕೂಟದ ಉದ್ಘಾಟನ ಪಂದ್ಯದಲ್ಲಿ ಎದುರಾಗುವ ತಂಡಗಳೆಂದರೆ ಆತಿ ಥೇಯ ಕತಾರ್ ಮತ್ತು ಈಕ್ವಡೋರ್. ಈ ಪಂದ್ಯ ರವಿವಾರ ನಡೆಯಲಿದೆ. ಅಂದೇ ನೆದರ್ಲೆಂಡ್ಸ್-ಸೆನೆಗಲ್ ಮುಖಾಮುಖಿ ಆಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇನ್ನು ಫ್ರಾಂಚೈಸಿಯವರೆಗೆ ಬಿಟ್ಟಿದ್ದು…; ಆಟಗಾರರ ಪಂದ್ಯದ ಒತ್ತಡದ ಕುರಿತು ರೋಹಿತ್ ಮಾತು
ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
ಇದು ಸಾಮೂಹಿಕ ವೈಫಲ್ಯ: ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ
ವೈಫಲ್ಯದ ಮೇಲೆ ವೈಫಲ್ಯ ; ಮತ್ತೆ ಗೋಲ್ಡನ್ ಡಕ್ ದಾಖಲಿಸಿದ ಸೂರ್ಯಕುಮಾರ್ !
ಸೋಲಿಗೆ ಶರಣಾದ ಟೀಮ್ ಇಂಡಿಯಾ: ಏಕದಿನ ಸರಣಿ ಗೆದ್ದ ಆಸೀಸ್
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ