ಮರಳಿದ ನೇಮರ್‌ ಬ್ರಝಿಲ್‌ ಸೂಪರ್‌; ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ


Team Udayavani, Dec 6, 2022, 11:18 PM IST

ಮರಳಿದ ನೇಮರ್‌ ಬ್ರಝಿಲ್‌ ಸೂಪರ್‌; ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ದೋಹಾ: “ಸೇಮ್‌ ಓಲ್ಡ್‌ ನೇಮರ್‌’ ಮರಳಿ ತಂಡ ಸೇರಿಕೊಂಡು ತನ್ನ ಎಂದಿನ ತಾಕತ್ತು ತೋರಿಸುವ ಮೂಲಕ ಬ್ರಝಿಲ್‌ ಖುಷಿ ಖುಷಿಯಾಗಿ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಪ್ರಿ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿ ಅದು ಏಷ್ಯಾದ ಬಲಿಷ್ಠ ತಂಡವಾದ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿ ಮೆರೆಯಿತು.

ಬ್ರಝಿಲ್‌ ತನ್ನ ಈ ಗೆಲುವನ್ನು ಹಾಸಿಗೆ ಹಿಡಿದಿರುವ ಲೆಜೆಂಡ್ರಿ ಆಟಗಾರ ಪೀಲೆಗೆ ಅರ್ಪಿಸಿತು. ಪೀಲೆ ಕೂಡ ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿರುವುದು ಬ್ರಝಿಲ್‌ ಸಂತಸವನ್ನು ಇಮ್ಮಡಿಗೊಳಿಸಿದೆ.

ಇದಕ್ಕೂ ಹಿಂದಿನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರನ್ನರ್ ಅಪ್‌ ಕ್ರೊವೇಶಿಯ ಶೂಟೌಟ್‌ನಲ್ಲಿ ಜಪಾನ್‌ಗೆ 3-1 ಅಂತರದ ಸೋಲುಣಿಸಿತ್ತು. ಇದರೊಂದಿಗೆ ಏಷ್ಯಾದ ತಂಡಗಳಿಗೆ ವಿಶ್ವಕಪ್‌ ಬಾಗಿಲು ಮುಚ್ಚಿ ದಂತಾಯಿತು. ಶುಕ್ರವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಝಿಲ್‌-ಕ್ರೊವೇಶಿಯ ಮುಖಾಮುಖೀ ಆಗಲಿವೆ.

ಇನ್ನೊಂದೆಡೆ ದಕ್ಷಿಣ ಕೊರಿಯಾ ಸೋತ ಬೆನ್ನಲೇ ಕೋಚ್‌ ಪಾವ್ಲೊ ಬೆಂಟೊ ಹುದ್ದೆಯಿಂದ ಕೆಳಗಿಳಿಯು ವುದಾಗಿ ಘೋಷಿಸಿದರು. ಮೂಲತಃ ಪೋರ್ಚುಗಲ್‌ನವರಾದ ಬೆಂಟೊ ಕಳೆದ ವಿಶ್ವಕಪ್‌ ಬಳಿಕ ದಕ್ಷಿಣ ಕೊರಿಯಾ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ವಿಶ್ವಕಪ್‌ ಕೊನೆಗೆ ಇವರ ಅವಧಿ ಮುಗಿಯುತ್ತಿತ್ತು.ಇದು “ಸ್ಟೇಡಿಯಂ 974’ನಲ್ಲಿ ನಡೆದ ಕೊನೆಯ ವಿಶ್ವಕಪ್‌ ಪಂದ್ಯ.

ಆಕ್ರಮಣಕಾರಿ ಆರಂಭ
ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಬ್ರಝಿಲ್‌ ತನ್ನ ನಾಲ್ಕೂ ಗೋಲುಗಳನ್ನು ಬರೀ 36 ನಿಮಿಷಗಳಲ್ಲಿ ಸಿಡಿಸಿತು. 7ನೇ ನಿಮಿಷದಲ್ಲೇ ವಿನ್ಸಿಯಸ್‌ ಜೂನಿ ಯರ್‌ ಖಾತೆ ತೆರೆದರು. 10ನೇ ನಿಮಿಷದಲ್ಲಿ ನೇಮರ್‌ ಮ್ಯಾಜಿಕ್‌ ಮಾಡಿದರು. ನೇಮರ್‌ ಈ ವಿಶ್ವಕಪ್‌ ಕೂಟದಲ್ಲಿ ಹೊಡೆದ ಮೊದಲ ಗೋಲು ಇದಾಗಿದೆ. ಹಾಗೆಯೇ 3 ವಿಶ್ವಕಪ್‌ಗ್ಳಲ್ಲಿ ಗೋಲು ಹೊಡೆದ ಬ್ರಝಿಲ್‌ನ 3ನೇ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಪೀಲೆ ಮತ್ತು ರೊನಾಲ್ಡೊ.

29ನೇ ನಿಮಿಷದಲ್ಲಿ ರಿಚಾರ್ಲಿಸನ್‌ ಈ ಮುನ್ನಡೆಯನ್ನು ಮೂರಕ್ಕೆ ಏರಿಸಿ ದರು. ಲುಕಾಸ್‌ ಪಕ್ವೇಟ 36ನೇ ನಿಮಿಷದಲ್ಲಿ 4ನೇ ಗೋಲು ಬಾರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.

ಎಲ್ಲ ಮುಗಿದ ಬಳಿಕ 76ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಪೈಕ್‌ ಸೆಯುಂಗ್‌ ಗೋಲೊಂದನ್ನು ಹೊಡೆದು ಸೋಲಿನ ಅಂತರವನ್ನು ತಗ್ಗಿಸಿದರು.

ದ. ಕೊರಿಯಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಾದರೆ ಪವಾಡವೇ ಸಂಭವಿಸಬೇಕಿತ್ತು. 2002ರಲ್ಲಿ ಅದು ಪ್ರಿ ಕ್ವಾರ್ಟರ್‌ ಫೈನಲ್‌ ದಾಟಿ ಸೆಮಿಫೈನಲ್‌ ತನಕ ಮುನ್ನುಗ್ಗಿತ್ತು. ಅಂದು ದಕ್ಷಿಣ ಕೊರಿಯಾ ಫಿಫಾ ವಿಶ್ವಕಪ್‌ ಪಂದ್ಯಾ ವಳಿಯ ಜಂಟಿ ಆತಿಥ್ಯ ವಹಿಸಿ ಸ್ಮರಣೀಯ ಸಾಧನೆಗೈದಿತ್ತು.

 

ಟಾಪ್ ನ್ಯೂಸ್

Udupi ಖಾತೆಯಿಂದ ಲಕ್ಷಾಂತರ ರೂ. ವಂಚನೆ

Udupi ಖಾತೆಯಿಂದ ಲಕ್ಷಾಂತರ ರೂ. ವಂಚನೆ

Byndoor ದರೋಡೆ ಯತ್ನ: ಮೂವರ ಬಂಧನ

Byndoor ದರೋಡೆ ಯತ್ನ: ಮೂವರ ಬಂಧನ

Mumbai ರಸ್ತೆ ಅಪಘಾತ; ಚೇವಾರು ಬಳಿಯ ಯುವಕ ಸಾವು

Mumbai ರಸ್ತೆ ಅಪಘಾತ; ಚೇವಾರು ಬಳಿಯ ಯುವಕ ಸಾವು

Kasaragod ವಿದೇಶಿ ಕರೆನ್ಸಿ ಸಹಿತ ಇಬ್ಬರು ಪೊಲೀಸರ ವಶಕ್ಕೆ

Kasaragod ವಿದೇಶಿ ಕರೆನ್ಸಿ ಸಹಿತ ಇಬ್ಬರು ಪೊಲೀಸರ ವಶಕ್ಕೆ

Constitution ಪರವಿದ್ದವರಿಗೆ ಅಧಿಕಾರ ನೀಡಿ : ಸಿದ್ದರಾಮಯ್ಯ

Constitution ಪರವಿದ್ದವರಿಗೆ ಅಧಿಕಾರ ನೀಡಿ : ಸಿದ್ದರಾಮಯ್ಯ

Anantkumar Hegde ಸಂಸದನಾಗಿರಲು ಅನರ್ಹ: ಸಿಎಂ ಸಿದ್ದರಾಮಯ್ಯ ಆಕ್ರೋಶ

Anantkumar Hegde ಸಂಸದನಾಗಿರಲು ಅನರ್ಹ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಇನ್ನೂ 9 ವರ್ಷ ಕಾಂಗ್ರೆಸ್‌ ಆಡಳಿತ,ಗ್ಯಾರಂಟಿಯೂ ಖಾತ್ರಿ: ಡಿಕೆಶಿ

ಇನ್ನೂ 9 ವರ್ಷ ಕಾಂಗ್ರೆಸ್‌ ಆಡಳಿತ,ಗ್ಯಾರಂಟಿಯೂ ಖಾತ್ರಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqewq

Test  ಸರಣಿಯಲ್ಲಿ 600 ಪ್ಲಸ್‌ ರನ್‌: ಜೈಸ್ವಾಲ್‌ ಭಾರತದ 5ನೇ ಆಟಗಾರ

1-asdsdsad

Ranji quarterfinal: ಮುಶೀರ್‌ ಖಾನ್‌ ಅಜೇಯ ದ್ವಿಶತಕ

1-wewqeq

Para cricketer ಅಮೀರ್‌ ಹುಸೇನ್‌ ಭೇಟಿ ಮಾಡಿದ ಸಚಿನ್‌

1-wqewqew

WPL :ಯುಪಿ ವಾರಿಯರ್ ವಿರುದ್ಧ ಆರ್‌ಸಿಬಿಗೆ 2 ರನ್‌ ಗೆಲುವು

1-sasdsad

Mumbai Indians ಹುಡುಗಿ ರಾತ್ರೋ ರಾತ್ರಿ ಸ್ಟಾರ್: ಭತ್ತದ ಗದ್ದೆಯಿಂದ ಕ್ರೀಡಾಂಗಣಕ್ಕೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

sebi

SEBI; ನಿಯಮ ಪಾಲನೆ ನಿಗಾಕ್ಕೆ ಎಐ ಬಳಕೆ

1-sasadas

Congress ಅಧಿಕಾರಕ್ಕೆ ಬಂದರೆ ಜಾತಿಗಣತಿ: ಪ್ರಿಯಾಂಕಾ ವಾದ್ರಾ

Udupi ಖಾತೆಯಿಂದ ಲಕ್ಷಾಂತರ ರೂ. ವಂಚನೆ

Udupi ಖಾತೆಯಿಂದ ಲಕ್ಷಾಂತರ ರೂ. ವಂಚನೆ

Byndoor ದರೋಡೆ ಯತ್ನ: ಮೂವರ ಬಂಧನ

Byndoor ದರೋಡೆ ಯತ್ನ: ಮೂವರ ಬಂಧನ

Mumbai ರಸ್ತೆ ಅಪಘಾತ; ಚೇವಾರು ಬಳಿಯ ಯುವಕ ಸಾವು

Mumbai ರಸ್ತೆ ಅಪಘಾತ; ಚೇವಾರು ಬಳಿಯ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.