
ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್
Team Udayavani, Jul 16, 2019, 5:38 AM IST

ಲಂಡನ್: ವಿಶ್ವಕಪ್ ಕ್ರಿಕೆಟ್ ಕೂಟದ ಸಂಘರ್ಷ ಪೂರ್ಣ ಫೈನಲ್ ಸೆಣಸಾಟದಲ್ಲಿ ಇಂಗ್ಲೆಂಡ್ ವಿರುದ್ಧ ಬೌಂಡರಿ ಕೌಂಟ್ ನಿಯಮದಡಿ ನ್ಯೂಜಿಲ್ಯಾಂಡ್ ಸೋತಿರುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ, ಐಸಿಸಿ ರೂಪಿಸಿದ ಪ್ರಶ್ನಾರ್ಹ ಬೌಂಡರಿ ಕೌಂಟ್ ನಿಯಮವನ್ನು ಪ್ರಶ್ನಿಸುವ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ವಿಲಿಯಮ್ಸನ್ ನಿಜವಾದ ಕೀಡಾಸ್ಫೂರ್ತಿ ಮೆರೆದರು.
ಐಸಿಸಿ ನಿಯಮದ ಬಗ್ಗೆ ಕೇಳಿದಾಗ “ನೀವು ಈ ರೀತಿಯ ಪ್ರಶ್ನೆ ಕೇಳುತ್ತೀರಿ ಎಂಬುದನ್ನು ಆಲೋಚಿಸಲು ಸಾಧ್ಯವಿಲ್ಲ ಮತ್ತು ಇಂತಹ ಪ್ರಶ್ನೆಗೆ ನಾನು ಉತ್ತರಿಸುತ್ತೇನೆಂದು ಕೂಡ ಆಲೋಚನೆ ಮಾಡಿರಲಿಕ್ಕಿಲ್ಲ’ ಎಂದು ವಿಲಿಯಮ್ಸನ್ ಉತ್ತರಿಸಿದರು.
ವಿಶ್ವಕಪ್ ಗೆಲ್ಲುವ ನಿಟ್ಟಿನಲ್ಲಿ ಎರಡೂ ತಂಡಗಳು ಕಠಿನ ಅಭ್ಯಾಸ ನಡೆಸಿವೆ. ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವುದು ಎಲ್ಲರ ನಿರೀಕ್ಷೆ ಕೂಡ. ಅದಕ್ಕಾಗಿ ನಾವು ಕೊನೆ ಕ್ಷಣದವರೆಗೂ ಹೋರಾಡಿದ್ದೇವೆ. ಆದರೆ ಐಸಿಸಿಯ ನಿಯಮದಿಂದ ಪ್ರಶಸ್ತಿ ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಲಿಯಮ್ಸನ್ ಹೇಳಿದರು.
ಟಾಪ್ ನ್ಯೂಸ್
