ತಿಂಗಳಾಂತ್ಯದಲ್ಲಿ ಕ್ರೀಡಾಪಟುಗಳಿಗೆ ಬಹಿರಂಗ ಅಭ್ಯಾಸಕ್ಕೆ ಅವಕಾಶ: ರಿಜಿಜು
Team Udayavani, May 11, 2020, 10:50 AM IST
ನವದೆಹಲಿ: ಒಲಿಂಪಿಕ್ಸ್ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ದೇಶದ ಅಗ್ರ ಕ್ರೀಡಾಪಟುಗಳಿಗೆ ಈ ತಿಂಗಳಾಂತ್ಯದಲ್ಲಿ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುವು ಮಾಡಿ ಕೊಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ ನೀಡಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ದಿಗ್ಬಂಧನವಿದ್ದು ಅಥ್ಲೀಟ್ಗಳ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅನುಮತಿ ಇರಲಿಲ್ಲ. ಇದೀಗ ಲಾಕ್ಡೌನ್ ಮೇ 17ರ ಬಳಿಕ ಅಂತ್ಯವಾಗಲಿದೆ , ಆನಂತರ ಕ್ರೀಡಾಪಟುಗಳಿಗೆ ಹೊರಗೆ ಅಭ್ಯಾಸ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್-19 ಕಾರಣದಿಂದ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿದೆ. ಜಪಾನಿನ ಟೋಕ್ಯೋದಲ್ಲಿ ಜುಲೈನಲ್ಲಿ ನಡೆಯಬೇಕಿದ್ದ ಜಗತ್ತಿನ ಅತೀ ದೊಡ್ಡ ಕ್ರೀಡಾ ಕೂಟ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.