
ವನಿತಾ ಅಂಡರ್-19 ವಿಶ್ವಕಪ್: ವಿಂಡೀಸ್, ಪಾಕ್ ವಿಜಯ
ಭಾರತ-ಯುಎಇ ಮುಖಾಮುಖಿ
Team Udayavani, Jan 15, 2023, 10:51 PM IST

ಬೆನೋನಿ: ಅಂಡರ್-19 ವನಿತಾ ಟಿ20 ವಿಶ್ವಕಪ್ ಕೂಟದ ರವಿವಾರದ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ಥಾನ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜಯ ಸಾಧಿಸಿವೆ.
ವೆಸ್ಟ್ ಇಂಡೀಸ್ 7 ರನ್ನುಗಳಿಂದ ಐರ್ಲೆಂಡ್‌ಗೆ ಸೋಲುಣಿಸಿತು. ಪಾಕಿ ಸ್ಥಾನ 8 ವಿಕೆಟ್ ಅಂತರದಿಂದ ರವಾಂಡ ವನ್ನು ಪರಾಭವಗೊಳಿಸಿತು. ಇಂಗ್ಲೆಂಡ್ ಹುಡುಗಿಯರದು ಭರ್ಜರಿ ಗೆಲುವು. ಅವರು 174 ರನ್ ಅಂತರದಿಂದ ಜಿಂಬಾಬ್ವೆಯನ್ನು ಕೆಡವಿದರು. ನ್ಯೂಜಿಲ್ಯಾಂಡ್ 10 ವಿಕೆಟ್‌ಗಳಿಂದ ಇಂಡೋನೇಷ್ಯಾವನ್ನು ಮಣಿಸಿತು.
ಗೆಲುವಿನ ಉತ್ಸಾಹದಲ್ಲಿ ಭಾರತ
ಸೋಮವಾರ ಭಾರತ ತಂಡ ಯುಎಇ ವಿರುದ್ಧ ಆಡಲಿದೆ. ಆತಿಥೇಯ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್ ಗಳಿಂದ ಪರಾಭವಗೊಳಿಸಿದ ಹುಮ್ಮಸ್ಸಿ ನಲ್ಲಿರುವ ಶಫಾಲಿ ವರ್ಮ ಪಡೆ ಇದೇ ಲಯವನ್ನು ಕಾಯ್ದುಕೊಳ್ಳುವ ಉಮೇದಿ ನಲ್ಲಿದೆ. ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಅಗತ್ಯವಿದೆ.
ಶಫಾಲಿ ವರ್ಮ, ಅವರ ಜತೆಗಾರ್ತಿ ಶ್ವೇತಾ ಸೆಹ್ರಾವತ್ ದಕ್ಷಿಣ ಆಫ್ರಿಕಾ ವಿರುದ್ಧ ಸಖತ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಬ್ಯಾಟಿಂಗ್ ಟ್ರ್ಯಾಕ್ ಮೇಲೆ ಬೌಲರ್‌ಗಳಿಂದ ಮ್ಯಾಜಿಕ್ ನಡೆದಿರಲಿಲ್ಲ.
ಯುಎಇ ಕೂಡ ತನ್ನ ಮೊದಲ ಪಂದ್ಯವನ್ನು ಜಯಿಸಿದ್ದನ್ನು ಮರೆ ಯುವಂತಿಲ್ಲ. ಅದು ಸ್ಕಾಟ್ಲೆಂಡ್‌ಗೆ 6 ವಿಕೆಟ್‌ಗಳ ಸೋಲುಣಿಸಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಗ್ಯಾರಂಟಿ ಯೋಜನೆಗೆ ಹಣದ ಕ್ರೋಢೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ನಳಿನ್ ಕಟೀಲ್

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Congress Guarantee ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ!