ಪ್ರೊ ಕಬಡ್ಡಿ ಹರಾಜು: ಪ್ರದೀಪ್ ನರ್ವಾಲ್ಗೆ ಇತಿಹಾಸದಲ್ಲೇ ಗರಿಷ್ಠ ಮೊತ್ತ
Team Udayavani, Aug 31, 2021, 8:30 AM IST
ನವದೆಹಲಿ: ಸೋಮವಾರ ಪ್ರೊ ಕಬಡ್ಡಿ ಲೀಗ್ನ ಮಹತ್ವದ ಹರಾಜು ನಡೆದಿದೆ.ದೇಶ-ವಿದೇಶದ ನೂರಾರು ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ ಹರ್ಯಾಣದ ಪ್ರದೀಪ್ ನರ್ವಾಲ್ 1.65 ಕೋಟಿ ರೂ. ಯುಪಿ ಯೋಧಾ ತಂಡಕ್ಕೆ ಮಾರಾಟವಾಗಿ, ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾದ ದಾಖಲೆ ನಿರ್ಮಿಸಿದರು.
ಇನ್ನು ಸಿದ್ಧಾರ್ಥ್ ದೇಸಾಯಿ 1.30 ಕೋಟಿ ರೂ.ಗೆ ತೆಲುಗು ಟೈಟಾನ್ಸ್ ಪಾಲಾದರು. ಮಂಜೀತ್ (ತಮಿಳ್ ತಲೈವಾಸ್, 92 ಲ.ರೂ.), ಸಚಿನ್ (ಪಾಟ್ನಾ ಪೈರೇಟ್ಸ್, 84 ಲಕ್ಷ ರೂ.), ರೋಹಿತ್ ಗುಲಿಯ (ಹರ್ಯಾಣ ಸ್ಟೀಲರ್ಸ್, 83 ಲಕ್ಷ ರೂ.) ಗರಿಷ್ಠ ಬೆಲೆಗೆ ಮಾರಾಟವಾದ ಇತರೆ ಆಟಗಾರರು.
ಇನ್ನು ಕರ್ನಾಟಕದ ಖ್ಯಾತ ರೈಡರ್ ಪ್ರಶಾಂತ್ ಕುಮಾರ್ ರೈ ಪಾಟ್ನಾ ಪೈರೇಟ್ಸ್ ತಂಡಕ್ಕೆ ಮಾರಾಟವಾದರು. ಇವರ ಪಡೆದ ಮೊತ್ತ 55 ಲಕ್ಷ ರೂ. ಗರಿಷ್ಠ ಬೆಲೆ ಪಡೆದವರ ಪಟ್ಟಿಯಲ್ಲಿ ಇವರು ಜಂಟಿ 14ನೇ ಸ್ಥಾನ ಪಡೆದಿದ್ದಾರೆ.
ವಿದೇಶೀಯರ ಪೈಕಿ ಮೊಹಮ್ಮದ್ ರೆಝಾಗೆ 31 ಲಕ್ಷ ರೂ.: ಸೋಮವಾರ ನಡೆದ ಹರಾಜಿನಲ್ಲಿ ಐದು ಮಂದಿ ವಿದೇಶಿ ಆಟಗಾರರು ಗರಿಷ್ಠ ಬೆಲೆಗೆ ಮಾರಾಟವಾಗಿದ್ದಾರೆ. ಇರಾನಿನ ಆಲ್ರೌಂಡರ್ ಮೊಹಮ್ಮದ್ ರೆಝಾಚಿಯನೆಹ್ (31ಲಕ್ಷ ರೂ., ಪಾಟ್ನಾ ಪೈರೇಟ್ಸ್), ಅಬೋಝರ್ ಮಿಘಾನಿ (30.50ಲಕ್ಷ ರೂ., ಬೆಂಗಾಲ್ ವಾರಿಯರ್ಸ್), ದ.ಕೊರಿಯದ ಜಾಂಗ್ಕುನ್ಲೀ(20.50ಲಕ್ಷ ರೂ., ಪಾಟ್ನಾ ಪೈರೇಟ್ಸ್), ಇರಾನಿನ ಹದಿಒಷ್ಟೊರಾಕ್ (20 ಲಕ್ಷ ರೂ., ಗುಜರಾತ್ ಜೈಂಟ್ಸ್), ಮೊಹಮ್ಮದ್ ಮಘ್ ಸೊಡೊ (13.20ಲಕ್ಷ ರೂ., ಹರ್ಯಾಣ ಸ್ಟೀಲರ್ಸ್) ಈ ಆಟಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್