
ಎರಡನೇ ಟೆಸ್ಟ್ ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್; ಆಸೀಸ್ ಗೆ ಹೊಸ ನಾಯಕ
Team Udayavani, Dec 16, 2021, 8:37 AM IST

ಅಡಿಲೇಡ್: ಟೆಸ್ಟ್ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯವನ್ನೇ ಗೆದ್ದುಕೊಂಡಿದ್ದ ಆಸೀಸ್ ನ ವೇಗಿ ಪ್ಯಾಟ್ ಕಮಿನ್ಸ್ ಅವರು ಎರಡನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಉಪನಾಯಕ ಸ್ಟೀವ್ ಸ್ಮಿತ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬಂದ ಕಾರಣದಿಂದ ಪ್ಯಾಟ್ ಕಮಿನ್ಸ್ ಅವರು ತಂಡದಿಂದ ದೂರವಾಗಿದ್ದಾರೆ. ಬುಧವಾರ ಸಂಜೆ ಅವರು ಹೋಟೆಲ್ ನಲ್ಲಿ ನಿಕಟ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಸೋಂಕು ದೃಢವಾಗಿದೆ. ಸದ್ಯ ಪ್ಯಾಟ್ ಕಮಿನ್ಸ್ ಕೋವಿಡ್ ವರದಿ ನೆಗೆಟಿವ್ ಬಂದಿದೆಯಾದರೂ, ದಕ್ಷಿಣ ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ-ಸುರಕ್ಷತಾ ನಿಯಮಗಳ ಅಡಿಯಲ್ಲಿ ಅವರು ಈಗ ಏಳು ದಿನಗಳವರೆಗೆ ಪ್ರತ್ಯೇಕವಾಗಿರಬೇಕಿದೆ.
2018 ರಲ್ಲಿ ಬಾಲ್-ಟ್ಯಾಂಪರಿಂಗ್ ಹಗರಣದ ನಂತರ ಸ್ಟೀವ್ ಸ್ಮಿತ್ ಮೊದಲ ಬಾರಿಗೆ ತಂಡದ ನಾಯಕರಾಗಿದ್ದಾರೆ. ಆ್ಯಶಸ್ ಗೂ ಮೊದಲು ನಾಯಕ ಟಿಮ್ ಪೇನ್ ಅವರು ನಾಯಕತ್ವ ತ್ಯಜಿಸಿದ ಬಳಿಕ ಕಮಿನ್ಸ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಸ್ಟೀವ್ ಸ್ಮಿತ್ ಅವರಿಗೆ ಉಪನಾಯಕನ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ:ಇಂಗ್ಲೆಂಡಿಗೆ ಕಾದಿದೆ ಡೇ-ನೈಟ್ ಸವಾಲು
ಆ್ಯಶಸ್ ಸರಣಿಯ ಎರಡನೇ ಪಂದ್ಯ ಇಂದು ಅಡಿಲೇಡ್ ಓವಲ್ ನಲ್ಲಿ ನಡೆಯಲಿದೆ. ಪಿಂಕ್ ಬಾಲ್ ಟೆಸ್ಟ್ ಇದಾಗಿದ್ದು, ಹೊನಲು ಬೆಳಕಿನಲ್ಲಿ ಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ಆಸೀಸ್ ಜಯಿಸಿದ್ದು ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ