ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!
Team Udayavani, Nov 29, 2021, 2:27 PM IST
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂದಿನ ಆವೃತ್ತಿಗೆ ಭಾರೀ ತಯಾರಿ ನಡೆಯುತ್ತಿದೆ. ಈ ಬಾರಿ ಮೆಗಾ ಹರಾಜು ನಡೆಯಲಿರುವ ಕಾರಣ ತಂಡಗಳು ಗರಿಷ್ಠ ತಲಾ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಈ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಯಲ್ಲಿ ತೊಡಗಿದೆ. ಇದುವರೆಗೆ ಯಾವುದೇ ತಂಡಗಳು ತಮ್ಮ ಪಟ್ಟಿಯಲ್ಲಿ ಅಂತಿಮ ಮಾಡಿಲ್ಲ.
ಆದರೆ ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ನೂತನ ತಂಡವಾದ ಲಕ್ನೋ ವಿರುದ್ದ ಬಿಸಿಸಿಐಗೆ ದೂರು ನೀಡಿದೆ ಎಂದು ವರದಿಯಾಗಿದೆ.
ನೂತನ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹರಾಜಿಗಿಂತ ಮೊದಲು ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಲಕ್ನೋ ತಂಡವು ಪಂಜಾಬ್ ಕಿಂಗ್ಸ್ ನ ಕೆ.ಎಲ್.ರಾಹುಲ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನ ರಶೀದ್ ಖಾನ್ ರನ್ನು ತನ್ನತ್ತ ಸೆಳೆಯಲು ಯತ್ನ ಮಾಡುತ್ತಿದೆ ಎಂದು ಈ ಎರಡು ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿದೆ.
ಇದನ್ನೂ ಓದಿ:ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು
ಈ ಬಗ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ನಾವು ಯಾವುದೇ ಲಿಖಿತ ದೂರನ್ನು ಸ್ವೀಕರಿಸಿಲ್ಲ. ಆದರೆ ಲಕ್ನೋ ತಂಡವು ಆಟಗಾರರನ್ನು ಸೆಳೆಯಲು ಯತ್ನಿಸುತ್ತಿರುವ ಬಗ್ಗೆ ಎರಡು ಫ್ರಾಂಚೈಸಿಗಳಿಂದ ಮೌಖಿಕ ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಅದು ನಿಜವೆಂದು ಸಾಬೀತಾದರೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸಮತೋಲನವನ್ನು ತೊಂದರೆಗೊಳಿಸಲು ನಾವು ಬಯಸುವುದಿಲ್ಲ. ತೀವ್ರ ಪೈಪೋಟಿ ಇರುವಾಗ ನೀವು ಅಂತಹ ವಿಷಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅಸ್ತಿತ್ವದಲ್ಲಿರುವ ತಂಡಗಳು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಿರುವಾಗ ಅದು ನ್ಯಾಯೋಚಿತವಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
ಉಡುಪಿ:ಹೊಟೇಲ್‌ಗಳಿಗೆ ತಟ್ಟಿದ ನೀರಿನ ಬಿಸಿ – ಹೆಚ್ಚಿದ ಟ್ಯಾಂಕರ್‌ಗಳ ಓಡಾಟ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?
ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !
ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ