
ಫುಟ್ಬಾಲ್ ಪಂದ್ಯಾಟದಲ್ಲಿ ಒಬ್ಬರಿಗೊಬ್ಬರು ಡಿಕ್ಕಿ; ಗೋಲ್ ಕೀಪರ್ ಸಾವು!
Team Udayavani, Oct 16, 2017, 4:44 PM IST

ಜಕಾರ್ತಾ: ಲಾಮೋಂಗಾನ್ ಫೂಟ್ ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಾಂಗ್ ನಡುವಿನ ಪಂದ್ಯಾಟದ ಸಂದರ್ಭದಲ್ಲಿ ಗೋಲ್ ಅನ್ನು ತಡೆಯುವಾಗ ತಮ್ಮದೇ ತಂಡದ ಸಹ ಆಟಗಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಇಂಡೋನೇಷ್ಯಾದ ಗೋಲ್ ಕೀಪರ್ ಕೋಯಿರುಲ್ ಹುಡಾ(38) ಸಾವನ್ನಪ್ಪಿರುವ ಆಘಾತಕಾರಿ ಸೋಮವಾರ ಘಟನೆ ನಡೆದಿದೆ.
ಹುಡಾ ಇಂಡೋನೇಷ್ಯಾ ಫುಟ್ಬಾಲ್ ಪಂದ್ಯದ ದಂತಕಥೆಯಾಗಿದ್ದರು, ಲಾಮೋಂಗಾನ್ ತಂಡದಲ್ಲಿ ಕೋಯಿರುಲ್ ಸುಮಾರು 500ಕ್ಕೂ ಅಧಿಕ ಫುಟ್ಬಾಲ್ ಪಂದ್ಯದಲ್ಲಿ ಆಟವಾಡಿದ್ದರು.
ಪಂದ್ಯದ ವೇಳೆ ಎದುರಾಳಿ ಆಟಗಾರ ಗೋಲ್ ಹೊಡೆಯುವುದನ್ನು ಹಿಡಿಯಲು ಹುಡಾ ಮುಂದಾಗಿದ್ದಾರೆ. ಈ ವೇಳೆ ಡಿಫೆಂಡರ್ ರಾಮನ್ ರೊಡ್ರಿಗಸ್ ಸಹ ಚೆಂಡನ್ನು ತಡೆಯಲು ಮುಂದಾಗಿದ್ದು ಈ ವೇಳೆ ಇಬ್ಬರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿದ್ದರು.
ಆ ಕ್ಷಣದಲ್ಲಿಯೇ ಹೂಡಾ ಫುಟ್ಬಾಲ್ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ತಲೆಗೆ ಪಟ್ಟು ಬಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹುಡಾ ಸಾವನ್ನಪ್ಪಿರುವುದಾಗಿ ಸೋಯಿಗಿರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Partygate case: ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್

Gangavathi: ಲಘುವಿಮಾನ ಹಾರಾಟ; ಗಾಬರಿಗೊಂಡ ಜನತೆ; ಅಧಿಕಾರಿಗಳಿಗೆ ಮೊಬೈಲ್ ಕರೆ

ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು

Balasore Tragedy; ಭೀಕರ ರೈಲ್ವೆ ದುರಂತದಲ್ಲಿ ಶವಾಗಾರವಾಗಿದ್ದ ಶಾಲೆ ನೆಲಸಮ

Movie Review: ದರ್ಬಾರ್ ಒಳಗೊಂದು ನಗೆಹಬ್ಬ