ಐದನೇ ಬಾರಿಗೆ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆದ್ದ ಪರ್ತ್ ಸ್ಕಾಚರ್ಸ್
Team Udayavani, Feb 4, 2023, 6:42 PM IST
ಪರ್ತ್: ಆ್ಯಶ್ಟನ್ ಟರ್ನರ್ ನಾಯಕತ್ವದ ಪರ್ತ್ ಸ್ಕಾಚರ್ಸ್ ತಂಡವು ಐದನೇ ಬಾರಿಗೆ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆದ್ದಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ವಿರುದ್ಧ ಪರ್ತ್ ತಂಡವು ಐದು ವಿಕೆಟ್ ಅಂತರದ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡವು ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದರೆ, ಪರ್ತ್ ತಂಡವು 19.2 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.
ಬ್ರಿಸ್ಬೇನ್ ಪರ ಮೆಕ್ ಸ್ವೀನಿ 41 ರನ್, ಹೀಜ್ಲೆಟ್ 34 ರನ್, ಜೋಶ್ ಬ್ರೌನ್ 25 ರನ್, ಮ್ಯಾಕ್ಸ್ ಬ್ರಯಾಂಟ್ 31 ರನ್ ಮಾಡಿದರು. ಪರ್ತ್ ಪರ ಬೆಹ್ರಾಂಡಾಫ್ ಮತ್ತು ಕೆಲ್ಲಿ ತಲಾ ಎರಡು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ್ದ ಪರ್ತ್ ಸ್ಕಾಚರ್ಸ್ ತಂಡಕ್ಕೆ ನಾಯಕ ಆ್ಯಶ್ಟನ್ ಟರ್ನರ್ ಅರ್ಧಶತಕ ಸಿಡಿಸಿ ನೆರವಾದರು. ಟರ್ನರ್ 53 ರನ್ ಮಾಡಿದರೆ, ಕೀಪರ್ ಇಂಗ್ಲಿಶ್ 26 ರನ್ ಮತ್ತು ಕೂಪರ್ ಅಜೇಯ 25 ರನ್ ಮಾಡಿದರು.
𝗖𝗵𝗮𝗺𝗽𝗶𝗼𝗻𝘀 – fifth BBL title for Perth Scorchers 🧡#BBL12 #CricketTwitter pic.twitter.com/iygj5mnxDi
— CricWick (@CricWick) February 4, 2023