ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಹಂತಕ್ಕೆ

ಯುಎಸ್‌ ಓಪನ್‌ ಬ್ಯಾಡ್ಮಿಂಟನ್‌

Team Udayavani, Jul 13, 2019, 5:23 AM IST

ಹೊಸದಿಲ್ಲಿ: ಭಾರತದ ಎಚ್‌ಎಸ್‌ ಪ್ರಣಯ್‌ ಮತ್ತು ಸೌರಭ್‌ ವರ್ಮ ಅವರು ತಮ್ಮ ಎದುರಾಳಿ ಯೆದುರು ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ಯುಎಸ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ್ದಾರೆ. ಇವರಿಬ್ಬರು ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖೀಯಾಗುತ್ತಿದ್ದಾರೆ.

ದ್ವಿತೀಯ ಶ್ರೇಯಾಂಕದ ಪ್ರಣ ಯ್‌ ಕೊರಿಯದ ಕ್ವಾಂಗ್‌ ಹೀ ಹಿಯೊ ಅವರನ್ನು 21-16, 18-21, 21-16 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ತಲುಪಿದರು. ಈ ಮೊದಲು ನಡೆದ ಪಂದ್ಯದಲ್ಲಿ ಸೌರಭ್‌ ತನ್ನ ದೇಶದವರೇ ಆದ ಲಾಕ್ಷ್ಯ ಸೆನ್‌ ಅವರನ್ನು 21-11, 19-21, 21-12 ಗೇಮ್‌ಗಳಿಂದ ಉರುಳಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ