

Team Udayavani, May 23, 2024, 10:22 PM IST
ಲಿಮಾ (ಪೆರು): ಭಾರತದ ವೇಟ್‌ಲಿಫ್ಟರ್ ಪ್ರೀತಿಸ್ಮಿತಾ ಭೋಯಿ ಅವರು ಐಡಬ್ಲ್ಯುಎಫ್ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನ ವನಿತೆಯರ 40 ಕೆ.ಜಿ. ವಿಭಾಗದ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ವಿಶ್ವದಾಖಲೆಯ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾರೆ.
15ರ ಹರೆಯದ ಅವರು ಹಾಲಿ ಇದ್ದ ದಾಖಲೆ (75 ಕೆ.ಜಿ.)ಗಿಂತ ಒಂದು ಕೆ.ಜಿ. ಹೆಚ್ಚಿನ ಭಾರ ಎತ್ತಿ ವಿಶ್ವದಾಖಲೆ ನಿರ್ಮಿಸಿದರು. ಸ್ನ್ಯಾಚ್‌ನಲ್ಲಿ 57 ಕೆ.ಜಿ. ಎತ್ತಿದ ಅವರು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 76 ಕೆ.ಜಿ. ಸಹಿತ ಒಟ್ಟು 133 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು. ಭಾರತದವರೇ ಆದ ಜ್ಯೋಶ್ನಾ ಸಬರ್ ಒಟ್ಟಾರೆ 125 (56+69) ಕೆ.ಜಿ.ಭಾರ ಎತ್ತಿ ಬೆಳ್ಳಿ ಪಡೆದರು. ಟಿರ್ಕಿಯ ಫಾತ್ಮಾ ಕೊಲ್ಕಾಕ್ ಕಂಜು ಜಯಿಸಿದರು.
Ad
You seem to have an Ad Blocker on.
To continue reading, please turn it off or whitelist Udayavani.